ಕೋರ್ಟ್ ಆವರಣದಲ್ಲೇ ವಕೀಲರ ಬರ್ಬರ ಕೊಲೆ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ವಿಜಯನಗರ, ಫೆ. 27. ನ್ಯಾಯಾಲಯದ ಆವರಣದಲ್ಲೇ ವಕೀಲರೋರ್ವರನ್ನು ಹತ್ಯೆಗೈದ ಆರೋಪಿಯನ್ನು ಬಂಧಿಸಿದ ಘಟನೆ ವರದಿಯಾಗಿದೆ.

ಹತ್ಯೆಯಾದವರನ್ನು ಕಾಂಗ್ರೆಸ್ ಮುಖಂಡ, ವಕೀಲ ತಾರಿಹಳ್ಳಿ ವೆಂಕಟೇಶ್ ಎಂದು ಗುರುತಿಸಲಾಗಿದೆ. ಇವರ ಕುತ್ತಿಗೆಯ ಭಾಗಕ್ಕೆ ಮಚ್ಚಿನಿಂದ ಹೊಡೆದು ಅವರ ಸಂಬಂಧಿಯೇ ಆದ ಮನೋಜ್ ಕುಮಾರ್ ಎಂಬಾತ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕೋರ್ಟ್ ಆವರಣದಲ್ಲೇ ರಕ್ತ ಚೆಲ್ಲಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Also Read  ಪಾಲಿಕೆ ವ್ಯಾಪ್ತಿಯಲ್ಲಿ ನೋಂದಣಿಯಾದ ಪರಿಶಿಷ್ಟ ಜಾತಿ/ ಪಂಗಡದ ಸಂಘಟನೆಗಳ ವಿವರ ನೀಡಲು ಸೂಚನೆ

error: Content is protected !!