ಪುತ್ತೂರು: ಹಾಡುಹಗಲೇ ಮನೆಯಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 27. ಮನೆಯೊಂದರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾದ ಘಟನೆ ಫೆ. 26 ರ ಹಾಡುಹಗಲೇ ಪುತ್ತೂರಿನ ದರ್ಬೆಯಲ್ಲಿ ನಡೆದಿದೆ.

ಕ್ಯಾಂಪ್ಕೊ ಉದ್ಯೋಗಿ ಬಾನುಕಿರಣ್ ಎಂಬವರ ಮನೆಯಲ್ಲಿ ಸುಮಾರು 3.5ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಬಾನುಕಿರಣ್ ಅವರ ಪತ್ನಿ ಬೆಳಂದೂರು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದು, ಮನೆಯ ಇಬ್ಬರೂ ಉದ್ಯೋಗಸ್ಥರಾಗಿರುವ ಹಿನ್ನಲೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಈ ಕೃತ್ಯವೆಸಗಲಾಗಿದೆ. ಇಬ್ಬರೂ ಬೆಳಗ್ಗೆ 8.30 ರ ಸುಮಾರಿಗೆ ಮನೆಯಿಂದ ಉದ್ಯೋಗಕ್ಕೆ ತೆರಳಿದ್ದು, ಆ ಬಳಿಕ ಕಳ್ಳರು ಮನೆಯ ಹಿಂಬದಿ ಕಿಟಕಿಯ ಕಬ್ಬಿಣದ ಸರಳನ್ನು ತುಂಡರಿಸಿ ಮನೆಯೊಳಗೆ ನುಗ್ಗಿದ್ದಾರೆ ಎಂದು ತಿಳಿದುಬಂದಿದೆ. ಸಂಜೆ ಕೆಲಸ ಮುಗಿಸಿ ಬಾನುಕಿರಣ್ ರವರು ಮನೆಗೆ ಬಂದಾಗ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಅವರು ನೀಡಿದ ದೂರಿನಂತೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಡಿಕೆಶಿ ನಿವಾಸದ ಮೇಲಿನ ಐಟಿ ದಾಳಿ ಮುಕ್ತಾಯ ► ದಾಳಿ ಬಳಿಕ ಸಚಿವ ಡಿಕೆಶಿ ಹೇಳಿದ್ದೇನು...?

error: Content is protected !!
Scroll to Top