ತನ್ನನ್ನೇ ಗುಂಡಿಕ್ಕಿ ಹತ್ಯೆಗೈಯ್ಯುವ ವಿಡಿಯೋ ಚಿತ್ರೀಕರಿಸಿದ ಯುವಕ ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಮುಝಾಫರ್ ನಗರ, ಫೆ. 27. ತನ್ನನ್ನು ತಾನೇ ಗುಂಡಿಕ್ಕಿ ಹತ್ಯೆ ಮಾಡುವ ಸನ್ನಿವೇಶವನ್ನು ಸ್ವತಃ ಮೃತ ವ್ಯಕ್ತಿಯೇ ಸ್ವಯಂ ಚಿತ್ರೀಕರಿಸಿಕೊಂಡ ಘಟನೆ ಉತ್ತರ ಪ್ರದೇಶದ ಮುಝಾಫರ್ ನಗರದಲ್ಲಿ ನಡೆದಿದೆ.

ಗುಂಡೇಟು ತಗುಲಿದ ಯುವಕನ ಕೈಯಿಂದ ಮೊಬೈಲ್ ಜಾರಿ ಕೆಳಕ್ಕೆ ಬಿದ್ದು, ದೃಶ್ಯಗಳು ಕಾಣಿಸುತ್ತಿರಲಿಲ್ಲ. ಆದರೆ ನೋವಿನಿಂದ ನರಳುವ ಆರ್ತನಾದ ಕೇಳಿ ಬರುತ್ತಿದ್ದ 30 ಸೆಕೆಂಡ್ ಗಳ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ಹತ್ಯೆಗೀಡಾದ ವ್ಯಕ್ತಿ ಮತ್ತು ಆರೋಪಿಯ ಹೊರತಾಗಿ ಮತ್ತಿಬ್ಬರು ವೀಡಿಯೊದಲ್ಲಿ ಕಾಣುತ್ತಿದ್ದು, ಅವರು ಮದ್ಯಪಾನ ಮಾಡುತ್ತಾ ಸಂಬಂಧವೇ ಇಲ್ಲದಂತೆ ಪಿಸ್ತೂಲಿನ ಸುತ್ತ ಅಡ್ಡಾಡುತ್ತಿದ್ದಾರೆ. ಆರೋಪಿಯು ಶೂಟ್ ಮಾಡುವ ಮುನ್ನ ಇಬ್ಬರೂ ಮಾತನಾಡುತ್ತಾ ನಗುತ್ತಿರುವ ದೃಶ್ಯ ಸೆರೆಯಾಗಿದ್ದು, ಇವೆಲ್ಲವನ್ನೂ ಹತ್ಯೆಗೀಡಾದ ವ್ಯಕ್ತಿ ಚಿತ್ರೀಕರಿಸಿಕೊಂಡಿದ್ದಾನೆ. ಆರೋಪಿ ಮತ್ತು ಮೃತ ವ್ಯಕ್ತಿ ಸಹೋದರ ಸಂಬಂಧಿಗಳಾಗಿದ್ದು, ಘಟನೆಯ ಸಂದರ್ಭದಲ್ಲಿ ಆರೋಪಿಯು ಪಿಸ್ತೂಲ್ ಸರಿ ಇದೆಯೇ ಎಂದು ಪರಿಶೀಲಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿ, ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ, ಇನ್ನಿಬ್ಬರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Also Read  ಪುಂಚತ್ತಾರು: ನೇಣು ಬಿಗಿದು ಯುವತಿ ಆತ್ಮಹತ್ಯೆ

error: Content is protected !!
Scroll to Top