ತೊಕ್ಕೊಟ್ಟು: ಅಕ್ರಮ ಗೋಮಾಂಸ ಸಾಗಾಟ ➤ ತಡೆಹಿಡಿದ ಬಜರಂಗದಳ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ತೊಕ್ಕೊಟ್ಟು, ಫೆ. 27. ಅಕ್ರಮ ಬೀಫ್ ಸ್ಟಾಲ್ ಗೆ ಬರುತ್ತಿದ್ದ ಅಕ್ರಮ ಗೋಮಾಂಸ ಸಾಗಾಟವನ್ನು ಬಜರಂಗದಳ ಕಾರ್ಯಕರ್ತರು ತಡೆದ ಘಟನೆ ತೊಕ್ಕೊಟ್ಟುವಿನಲ್ಲಿ ನಡೆದಿದೆ.


ಅಕ್ರಮ ಬೀಫ್ ಸ್ಟಾಲ್ ಗಳನ್ನು ಮುಚ್ಚಿಸುವಂತೆ ಉಳ್ಳಾಲ ಪುರಸಭೆಗೆ ಹಾಗೂ ಪೊಲೀಸ್ ಇಲಾಖೆಗೆ ಬಜರಂಗದಳವು ಕೆಲದಿನಗಳ ಹಿಂದೆ ಮನವಿ ಮಾಡಿದ್ದರೂ ಇಲಾಖೆಯಿಂದ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆ ಬಜರಂಗದಳ ನೇರ ಕಾರ್ಯಾಚರಣೆ ನಡೆಸಿ ಅಕ್ರಮ ಗೋಮಾಂಸವನ್ನು ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕರ್ನಾಟಕದಲ್ಲಿ ಗೋಹತ್ಯಾ ಕಾಯ್ದೆ ಜಾರಿಯಲ್ಲಿದ್ದರೂ ಅಕ್ರಮ ಗೋಮಾಂಸ ದಂಧೆ ರಾಜಾರೋಷವಾಗಿ ನಡೆಯುತ್ತಲೇ ಇದ್ದು, ಆದರೂ ಪೊಲೀಸ್ ಇಲಾಖೆ ಮೌನವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ “ಪಬ್ಲಿಕ್ ಪರೀಕ್ಷೆ” ➤ ಶಿಕ್ಷಣ ಇಲಾಖೆ ಸೂಚನೆ    

error: Content is protected !!
Scroll to Top