ಮಂಗಳೂರು: ನಾಳೆ (ಫೆ. 28) ದ.ಕ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಜಿಲ್ಲಾ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 27. ಬಿಜೆಪಿ ದಕ್ಷಿಣ ಕನ್ನಡ ಸಾಮಾಜಿಕ ಜಾಲತಾಣ ಪ್ರಕೋಷ್ಠ ಜಿಲ್ಲಾ ಮಟ್ಟದ ಕಾರ್ಯಾಗಾರವು ಫೆ.28ರಂದು ಮಂಗಳೂರು ಶಾರದಾ ವಿದ್ಯಾಲಯದಲ್ಲಿ ಬೆಳಿಗ್ಗೆ 9 ರಿಂದ ನಡೆಯಲಿದೆ.

ಕಾರ್ಯಾಗಾರವನ್ನು ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ ಎಂ ಉದ್ಘಾಟಿಸಲಿದ್ದು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ,ರಾಮದಾಸ್ ಬಂಟ್ವಾಳ್,ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿರುವರು. ಕಾರ್ಯಾಗಾರದಲ್ಲಿ  ಸಂಘಟನೆ ಮತ್ತು ಸಾಮಾಜಿಕ ಜಾಲತಾಣ ವಿಷಯದ ಕುರಿತಾಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಮಾತನಾಡುವರು. ಸಾಮಾಜಿಕ ಜಾಲತಾಣ ಪ್ರಕೋಷ್ಟದ ಜಿಲ್ಲಾ ಪ್ರಭಾರಿ ಭರತ್ ಕುಮಾರ್, ಜಿಲ್ಲಾ ಸಂಚಾಲಕ ಅಜಿತ್ ಕುಮಾರ್ ಉಳ್ಳಾಲ, ಸಹ ಸಂಚಾಲಕ ಸುಜಿತ್ ರಾಜ್ ಮೀನಾ ಉಪಸ್ಥಿತರಿರುವರು.

ಸಾಮಾಜಿಕ ಜಾಲತಾಣದ ಪರಿಣಾಮಕಾರಿ ವಿಷಯದ ಕುರಿತಾಗಿ ಬಿಜೆಪಿಯ ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಕಾರ್ಯಗಾರ ನಡೆಸಿಕೊಡುವರು. ಸಾಮಾಜಿಕ ಜಾಲತಾಣ ಪ್ರಕೋಷ್ಠ ಸಹಸಂಚಾಲಕರಾದ ಧೀರೇಶ್ ಕೊಲ್ಯ, ಕಿಶೋರ್ ಬಾಬು ಉಪಸ್ಥಿತರಿರುವರು. ಸಾಂಪ್ರದಾಯಿಕ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ವಿಷಯದ ಕುರಿತಾಗಿ ನಮ್ಮ ಟಿ.ವಿಯ ನಾಗೇಂದ್ರ ಶೆಣೈ ಕಾರ್ಯಗಾರ ನಡೆಸುವರು. ಸಾಮಾಜಿಕ ಜಾಲತಾಣ ಪ್ರಕೋಷ್ಠ ಸದಸ್ಯರಾದ ನರೇಶ್, ಅಕ್ಷಯ್ ಉಪಸ್ಥಿತರಿರುವರು.

Also Read  ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ- ಆರೋಪಿಗಳು ಎಸ್ಕೇಪ್ ➤ ಗೋಮಾಂಸ ಹಾಗೂ ಬೈಕ್ ವಶಕ್ಕೆ

ಸಾಮಾಜಿಕ ಜಾಲತಾಣದ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ರಾಜ್ಯ ಸಮಿತಿ ಸದಸ್ಯ ನಿತಿನ್ ರಾಜ್ ನಾಯ್ಕ್ ಮಾತನಾಡುವರು. ಸಾಮಾಜಿಕ ಜಾಲತಾಣ ಪ್ರಕೋಷ್ಠ ಸದಸ್ಯ ರವಿವರ್ಮ, ಸಹಸಂಚಾಲಕ ಕೀರ್ತನ್ ದಾಸ್ ಉಪಸ್ಥಿತರಿರುವರು. ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ವಿಜಯ ಕುಮಾರ್ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

Also Read  ಬಸ್ಸಿನಡಿಗೆ ಬಿದ್ದು ಗರ್ಭಿಣಿ ಮಹಿಳೆ ಮೃತ್ಯು

 

error: Content is protected !!
Scroll to Top