ಸಮ್ಯಕ್ತ್ ಜೈನ್ ರವರಿಗೆ ಜೈನ ಕಾಶಿ ಮೂಡಬಿದಿರೆಯಲ್ಲಿ “ಜೈನ ಯುವ ಸಾಹಿತಿ” ಸನ್ಮಾನ ➤ ಸ್ವಸ್ತಿಶ್ರೀ ಭಾರತಭೂಷಣ ಭಟ್ಟಾರಕ ಚಾರುಕೀರ್ತಿ ಸ್ವಾಮಿಗಳ ಪಾವನ ಸಾನಿಧ್ಯ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಫೆ. 26. ಧವಲತ್ರಯಗಳ ನೆಲೆವೀಡು ಮೂಡಬಿದಿರೆಯ ಬಡಗ ಬಸದಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ರಥೋತ್ಸವವು ಸ್ವಸ್ತಿಶ್ರೀ ‘ಭಾರತಭೂಷಣ’ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಫೆ.25 ರಂದು ನೆರವೇರಿದ್ದು, ಯುವ ಸಾಹಿತಿಯಾಗಿ ಹೊರಹೊಮ್ಮಿದ ಸಮ್ಯಕ್ತ್ ಜೈನ್ ರವರ ಸಾಧನೆಗಳನ್ನು ಪರಿಗಣಿಸಿ “ಜೈನ ಯುವ ಸಾಹಿತಿ” ಎಂದು ಗೌರವಿಸಿ ಸನ್ಮಾನಿಸಲಾಯಿತು.


ಈ ವೇಳೆ ಧರ್ಮಸ್ಥಳದ ಶ್ರೀ.ಡಿ.ಸುರೇಂದ್ರ ಕುಮಾರ್, ಅಳದಂಗಡಿಯ ತಿಮ್ಮಣ್ಮ ಅರಸರಾದ ಡಾ.ಪದ್ಮಪ್ರಸಾದ್ ಅಜಿಲ, ಮಾಜಿ ಸಚಿವ ಅಭಯಚಂದ್ರ ಜೈನ್, ಬಸದಿಯ ಮೊಕ್ತೇಸರರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸವನ್ನು ಎಸ್.ಬಿ ಕಾಲೇಜು ನೆಲ್ಯಾಡಿಯಲ್ಲಿ ಮುಂದುವರಿಸುತ್ತಿರುವ ಇವರು ನೂಜಿಬಾಳ್ತಿಲ ಹೊಸಂಗಡಿ ಬಸದಿ ಧರಣೇಂದ್ರ ಇಂದ್ರ ಹಾಗು ಮಂಜುಳಾರವರ ಸುಪುತ್ರ.

Also Read  ಶಾಸಕ ಭರತ್ ಶೆಟ್ಟಿ ಕೊರೋನಾದಿಂದ ಗುಣಮುಖ

error: Content is protected !!
Scroll to Top