ಪಂಜ: ಜಸ್ವಿತ್ ತೋಟ ಅವರಿಗೆ ಚಿತ್ರಕಲಾ ಸ್ಪರ್ಧೆಯಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮೆರಿಟ್ ಅವಾರ್ಡ್

(ನ್ಯೂಸ್ ಕಡಬ) newskadaba.com ಪಂಜ, ಫೆ. 25. ಪ್ರತಿಷ್ಠಿತ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಆಯೋಜಿಸಿದ ಜಾಗತಿಕ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕಡಬ ಸೈಂಟ್ ಆನ್ಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಜಸ್ವಿತ್ ತೋಟ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆರಿಟ್ ಅವಾರ್ಡ್ ರೂಪಾಯಿ 500 us ಡಾಲರ್ ಹಾಗೂ ಮೆರಿಟ್ ಸರ್ಟಿಫಿಕೇಟನ್ನು ಪಡೆದಿರುತ್ತಾನೆ ಮತ್ತು ಮಲ್ಟಿಪಲ್ ಅಧಿನಾಯಕ ಡಾ. ನಾಗರಾಜ ಬೈರಿರವರು ರೂಪಾಯಿ 10 ಸಾವಿರವನ್ನು ಘೋಷಿಸಿದ್ದಾರೆ.

317 D ಲಯನ್ಸ್ ಜಿಲ್ಲೆಯಲ್ಲಿ ಪಂಜ ಲಯನ್ಸ್ ಕ್ಲಬ್ ನ್ನು ಪ್ರತಿನಿಧಿಸಿ ಲಯನ್ಸ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಸುಮಾರು ದೇಶದಾದ್ಯಂತ 80ಕ್ಕಿಂತ ಹೆಚ್ಚಿನ ಲಯನ್ಸ್ ಜಿಲ್ಲೆಯ ಪ್ರತಿನಿಧಿಸಿ ವಿಶ್ವಶಾಂತಿಯ ಕಲಾಕೃತಿಗಳಲ್ಲಿ ಜಸ್ವಿತ್ ತೋಟ ಇವರ ಕಲಾಕೃತಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡಿರುತ್ತದೆ. ಸುಮಾರು 220 ದೇಶಗಳ ಕಲಾವಿದರು ಭಾಗವಹಿಸುವ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈತ ಹಿರಿಯ ಕ್ರೀಡಾ ಕೂಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಪಡೆದಿರುವ ಪಂಜದ ತೋಟ ಸುನಿಲ್ ಮತ್ತು ಮಮತಾ ಮಣಿ ತೋಟ ಇವರ ಪುತ್ರ. ಇವನಿಗೆ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ತರಬೇತಿಯನ್ನು ನೀಡಿರುತ್ತಾರೆ.

error: Content is protected !!

Join the Group

Join WhatsApp Group