ಯುಪಿ ಪೊಲೀಸರಿಂದ ಪಿಎಫ್ಐ ಕಾರ್ಯಕರ್ತರ ಬಂಧನ ➤ ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ವತಿಯಿಂದ ವಿವಿಧ ಕಡೆ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ. 25. ಸಂಘಟನಾ ಕಾರ್ಯವೈಖರಿಯಲ್ಲಿ ನಿರತರಾಗಿದ್ದ ಇಬ್ಬರು ಪಿಎಫ್ಐ ಅಮಾಯಕರನ್ನು ವಿನಾಕಾರಣ ಬಂಧಿಸಿ ಚಿತ್ರಹಿಂಸೆ ನೀಡಿದ ಉತ್ತರ ಪ್ರದೇಶ ಸರಕಾರ ಮತ್ತು ಪೊಲೀಸರ ವಿರುದ್ಧ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ರಾಷ್ಟ್ರವ್ಯಾಪಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಇದರ ಭಾಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ವತಿಯಿಂದ ಕಕ್ಕಿಂಜೆ, ಉಜಿರೆ, ಬೆಳ್ತಂಗಡಿ, ಕಾಜೂರು, ಗುರುವಾಯನಕೆರೆ, ಕನ್ನಡಿಕಟ್ಟೆ, ಪಿಳ್ಯ, ಪಡ್ಡಂದಡ್ಕ, ಮದ್ದಡ್ಕ, ಮಡಂತ್ಯಾರು, ಪುಂಜಾಲಕಟ್ಟೆ, ಪಾಂಡವರಕಲ್ಲು, ಮೂರುಗೋಳಿ, ಬಂಗೇರಕಟ್ಟೆ, ಕುದ್ರಡ್ಕ, ವಾಮದಪದವು ಮತ್ತು ಎನ್.ಸಿ ರೋಡ್ ಸೇರಿದಂತೆ 17 ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು.

Also Read  ಐತ್ತೂರು ಗ್ರಾಮದ ಜನತೆಯ ಬಹುಕಾಲದ "ಆಜನ" ಸೇತುವೆಗೆ ಕೊನೆಗೂ ಮುಕ್ತಿ ➤ ಸಚಿವ ಅಂಗಾರರಿಂದ ಗುದ್ದಲಿ ಪೂಜೆ..!

ಘೋಷಣೆ ಮತ್ತು ಪ್ಲೇಕಾರ್ಡ್ ಪ್ರದರ್ಶನಗಳ ಮೂಲಕ ಉತ್ತರ ಪ್ರದೇಶ ಸರಕಾರ ಮತ್ತು ಉತ್ತರ ಪ್ರದೇಶ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ಸ್ಥಳೀಯ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗಿನ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

error: Content is protected !!
Scroll to Top