(ನ್ಯೂಸ್ ಕಡಬ) newskadaba.com ಕಡಬ, ಫೆ. 24. ಸಮುದಾಯದ ಉನ್ನತ ವ್ಯಕ್ತಿಗಳನ್ನು ಮತ್ತು ಹೋರಾಟಗಾರರನ್ನು ದಮನಿಸುವ ಪ್ರಯತ್ನ ನಿರಂತರ ನಡೆಯುತ್ತಿರುವ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಇಂದು ಕಡಬದಲ್ಲಿ ಕೂಡಾ ಡಿವಿಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ಅಬ್ದುಲ್ ಜಲೀಲ್ ಕಳಾರ ಅವರು ಉತ್ತರ ಪ್ರದೇಶ ಯೋಗಿ ಸರ್ಕಾರದ ವಿರುದ್ದ ಪ್ರತಿಭಟಿಸುವವರನ್ನು ಅಲ್ಲಿನ ಪೋಲೀಸರು ದಮನಿಸುವ ಕಾರ್ಯವನ್ನು ನಿರಂತರ ಮಾಡಿಕೊಂಡು ಬರುತ್ತಿದ್ದು, ಇದೀಗ ಪಾಪ್ಯುಲರ್ ಫ್ರಂಟ್ ನ ನಾಯಕರು ಮತ್ತು ಕಾರ್ಯಕರ್ತರನ್ನು ಅನ್ಯಾಯವಾಗಿ ಅಪಹರಿಸಿ ಹಿಂಸೆ ನೀಡಿ ನಂತರ ಸುಳ್ಳಾರೋಪ ಮಾಡಿ ಕೇಸುಗಳನ್ನು ಹಾಕಿದ್ದು ಪ್ರಜಾ ಪ್ರಭುತ್ವ ಮತ್ತು ಸಂವಿಧಾನವನ್ನು ಕಡೆಗಣಿಸಿದ್ದಾರೆ ಎಂದು ಯೋಗಿ ಸರ್ಕಾರದ ವಿರುಧ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಸ್ಡಿಪಿಐಯ ರಾಜ್ಯ ಸಮಿತಿ ಸದಸ್ಯರಾದ ಆನಂದ ಮಿತ್ತಬೈಲ್ ರವರು ಸಂಧರ್ಬೋಚಿತವಾಗಿ ಮಾತನಾಡಿದರು. ಅಬ್ದುಲ್ ನೆಬಿ ಷಾನ್ ರವರು ಪ್ರತಿಭಟನೆಗೆ ಬಂದ ಅತಿಥಿಗಳನ್ನು ಮತ್ತು ಕಾರ್ಯಕರ್ತರನ್ನು ಸ್ವಾಗತಿಸಿದರು. ಆಶಿಕ್ ಕಡಬ
ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್ಡಿಪಿಐನ ವಲಯ ಅಧ್ಯಕ್ಷರು ಮತ್ತು ಡಿವಿಷನ್ ನ ನಾಯಕರು ಮತ್ತು ಹಲವಾರು ಕಾರ್ಯಕರ್ತರು, ಹಿತೈಷಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಮತ್ತು ಪೋಲೀಸರ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟಿಸಲಾಯಿತು.