ಸಂಚು ರೂಪಿಸುತ್ತಿದ್ದ ರೌಡಿ ಗ್ಯಾಂಗ್ ಮೇಲೆ ಸಿಸಿಬಿ ದಾಳಿ ➤ ನೆಲ್ಯಾಡಿಯ ವ್ಯಕ್ತಿ ಸೇರಿದಂತೆ 11 ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ. 24. ತಾಲೂಕಿನ ಶಿಶಿಲ ಗ್ರಾಮದ ನಿವಾಸಿ ರೌಡಿ ಶೀಟರ್ ಕಿರಣ್ ಗೌಡ ಎಂಬಾತನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರಿನಲ್ಲಿ ಇನ್ನೊಂದು ಗ್ಯಾಂಗಿನ ಮೇಲೆ ದಾಳಿ ನಡೆಸುವ ಕುರಿತು ಗುಂಪೊಂದು ಸಂಚು ರೂಪಿಸಿತ್ತು. ಇದರ ಖಚಿತ ಮಾಹಿತಿ ಪಡೆದ ಬೆಂಗಳೂರು ಸಿಸಿಬಿ ಪೊಲೀಸರು ಸಂಚುಕೋರರನ್ನು ಬೆನ್ನಟ್ಟಿ ಮಾರ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅದರಲ್ಲಿ ಓರ್ವ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ದೇವಸ ನಿವಾಸಿ ಕಿರಣ್ ಗೌಡ ಎಂಬಾತ ಸೇರಿದ್ದಾನೆಂದು ತಿಳಿದು ಬಂದಿದೆ. ಕಿರಣ್ ಗೌಡ ರವರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಒಟ್ಟು 9 ಕೇಸುಗಳು ದಾಖಲಾಗಿವೆ.

Also Read  ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ➤ ಕಡಬದಲ್ಲಿ ಸಕಲ ಸಿದ್ಧತೆ

error: Content is protected !!
Scroll to Top