ಕಡಬ: ಕೋಟೆಸಾರು ಹೊಳೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ ➤ ಸ್ವತಃ ನೀರಿಗಿಳಿದು ಮೃತದೇಹ ಮೇಲಕ್ಕೆತ್ತಿದ ಕಡಬ ಎಸ್ಐ ರುಕ್ಮನಾಯ್ಕ್

(ನ್ಯೂಸ್ ಕಡಬ) newskadaba.com ಕಡಬ, ಫೆ.23. ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದ ಕೈಕಂಬ ಸಮೀಪದ ಕೋಟೆಸಾರು ಹೊಳೆಯಲ್ಲಿ ಸುಮಾರು 65 ರಿಂದ 70 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಮೃತದೇಹವೊಂದು ಮಂಗಳವಾರದಂದು ಪತ್ತೆಯಾಗಿದೆ.

 

ಮಂಗಳವಾರದಂದು ಕೈಕಂಬದ ಕೋಟೆಸಾರು ಹೊಳೆಯಲ್ಲಿ ಅಪರಿಚಿತ ಮಹಿಳೆಯೋರ್ವರ ಮೃತದೇಹ ಕಂಡು ಬಂದಿದೆ. ಮೃತದೇಹದ ಸಮೀಪ ಮೃತರು ಧರಿಸಿದ ಚಪ್ಪಲ್ ಹಾಗೂ ಕೈಯಲ್ಲಿ ಕನ್ನಡಕ ಇದ್ದು, ಮೃತರು ಇಂದು ಬೆಳಿಗ್ಗೆ ಯಾವುದೋ ಕಾರಣಕ್ಕಾಗಿ ಹೊಳೆಗೆ ಇಳಿದ ವೇಳೆ ಕಾಲು ಜಾರಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಸ್ಥಳಕ್ಕೆ ತೆರಳಿದ ಕಡಬ ಎಸ್ಐ ರುಕ್ಮನಾಯ್ಕ್ ಸ್ವತಃ ನೀರಿಗೆ ಇಳಿದು ಊರವರ ಸಹಕಾರದೊಂದಿಗೆ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹವನ್ನು ದೇರಳಕಟ್ಟೆ ಮೆಡಿಕಲ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

Also Read  ಬುಡೋಳಿ: ಆಟೋ ರಿಕ್ಷಾಗೆ ಢಿಕ್ಕಿ ಹೊಡೆದ ಟ್ಯಾಂಕರ್ ► ಚಾಲಕನಿಗೆ ಗಾಯ

 

 

error: Content is protected !!
Scroll to Top