ಎಡಮಂಗಲ ಪ್ರೌಢಶಾಲೆಗೆ ಸಹಕಾರಿ ಸಂಘದಿಂದ ಇನ್ವರ್ಟರ್ ಕೊಡುಗೆ

(ನ್ಯೂಸ್ ಕಡಬ) newskadaba.com ಎಡಮಂಗಲ, ಫೆ. 23. ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಎಡಮಂಗಲ ಇದರ ವತಿಯಿಂದ ಎಡಮಂಗಲದ ಸರಕಾರಿ ಪ್ರೌಢ ಶಾಲೆಗೆ 2 ಕೆ.ವಿ. ಇನ್ವರ್ಟರ್ ಒಂದನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ನಿರ್ದೇಶಕರಾದ ಅವಿನಾಶ್ ದೇವರಮಜಲು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ್ ಡಿ. ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ರಾಮಚಂದ್ರ, ಉಪಾಧ್ಯಾಯರಾದ ಪದ್ಮನಾಭ ಹಾಗೂ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.

Also Read  ಬೆಳ್ಳಾರೆಯ 'ಸಫಾ ಫ್ರೂಟ್ಸ್' ನಲ್ಲಿ ಕೈಗೆಟುಕುವ ದರದಲ್ಲಿ ಹಣ್ಣುಹಂಪಲು ಮಾರಾಟ ➤ ಕಲ್ಲಂಗಡಿ ಕೆಜಿಗೆ 15 ರೂ., ಮೂಸಂಬಿ 4 ಕೆಜಿಗೆ 100 ರೂ.

error: Content is protected !!
Scroll to Top