?ಬೆಳ್ತಂಗಡಿ: ವ್ಯಕ್ತಿಗೆ ಚೂರಿಯಿಂದ ಇರಿತ ➤ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ನೆರಿಯ, ಫೆ. 23. ವ್ಯಕ್ತಿಯೋರ್ವರಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದ ಘಟನೆ ಫೆ.21ರಂದು ನೆರಿಯ ಕಾಡುರಾತ್ರಿ ಎಂಬಲ್ಲಿ ನಡೆದಿದೆ.

ಚೂರಿ ಇರಿತಕ್ಕೊಳಗಾದವರನ್ನು ನೆರಿಯ ಗ್ರಾಮದ ಮಾಥ್ಯೂ ಎನ್.ಟಿ ಎಂದು ಗುರುತಿಸಲಾಗಿದೆ. ಇವರು ತನ್ನ ಪುತ್ರ ಮಿಥುನ್ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ದ್ವಿಚಕ್ರ ವಾಹನದಲ್ಲಿ ಬಂದ ಪರಿಚಿತರೇ ಆದ ಸೋಜೋ ಹಾಗೂ ಅವರ ತಮ್ಮ ಜೋಬಿನ್ ಎಂಬವರು ಮಿಥುನ್ ರವರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಚೂರಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದನ್ನು ತಡೆಯಲು ಬಂದು ಮಿಥುನ್ ತಂದೆ ಮ್ಯಾಥ್ಯೂ ಅವರ ಎಡ ಕೆನ್ನೆಗೆ, ಎಡಕಿವಿಗೆ, ಎಡ ಕಿವಿಯ ಹಿಂಭಾಗ, ಎಡ ಕುತ್ತಿಗೆಗೆ ಹಾಗೂ ಹೊಟ್ಟೆಗೆ ದುಚ್ಕರ್ಮಿಗಳು ಚೂರಿಯಿಂದ ಇರಿದಿದ್ದು, ಇವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಬೊಬ್ಬೆ ಕೇಳಿ ಸ್ಥಳಕ್ಕೆ ಬಂದ ನೆರೆಮನೆಯ ಬಿನೀಶ್ ಅವರಿಗೂ ಆರೋಪಿಗಳು ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read    ಟರ್ಕಿ-ಸಿರಿಯಾದಲ್ಲಿ ಭೀಕರ ಭೂಕಂಪ ದುರಂತ ➤ ಮೃತಪಟ್ಟವರ ಸಂಖ್ಯೆ 21 ಸಾವಿರಕ್ಕೆ ಏರಿಕೆ

error: Content is protected !!
Scroll to Top