? ಟಿಕ್-ಟಾಕ್ ಸ್ಟಾರ್ ಸಮೀರ್ ಗಾಯಕವಾಡ್ ಆತ್ಮಹತ್ಯೆ…!

(ನ್ಯೂಸ್ ಕಡಬ) newskadaba.com ಮುಂಬೈ, ಫೆ. 22. ಟಿಕ್​-ಟಾಕ್ ಸ್ಟಾರ್ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈ ನಲ್ಲಿ ನಡೆದಿದೆ.

ಮೃತ ಯುವಕನನ್ನು ಸಮೀರ್ ಗಾಯಕವಾಡ್ (22) ಎಂದು ಗುರುತಿಸಲಾಗಿದೆ. ಈತ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಅಪಾರ ಅಭಿಮಾನಿಗಳನ್ನೂ ಗಳಿಸಿದ್ದರು. ಇದೀಗ ಅವರ ಅನಿರೀಕ್ಷಿತ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿದ್ದು, ಸಾವಿನ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಟಿಕ್​ಟಾಕ್ ಬ್ಯಾನ್ ನಂತರ ಇನ್​ಸ್ಟಾಗ್ರಾಂ ರೀಲ್ಸ್​ ಮೂಲಕ ಅಭಿಮಾನಿಗಳನ್ನು ತಲುಪುತ್ತಿದ್ದ ಈತ ಇನ್​ ಸ್ಟಾಗ್ರಾಂ ನಲ್ಲಿ ಸುಮಾರು 2,73,090 ಜನ ಹಿಂಬಾಲಕರನ್ನು ಹೊಂದಿದ್ದನು ಎನ್ನಲಾಗಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆಯೇ ಕಂಡುಬರುತ್ತಿದ್ದು, ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಅಕ್ರಮ ಹಣ ವರ್ಗಾವಣೆ ಪ್ರಕರಣ ➤ ಎರಡು ವರ್ಷದ ಬಳಿಕ ಕೇರಳ ಪತ್ರಕರ್ತನ ಬಿಡುಗಡೆ..!

error: Content is protected !!
Scroll to Top