ಕಡಬ: ಶ್ರೀ ಗಣೇಶ್ ಮೆಡಿಕಲ್ಸ್ ಸರ್ಜಿಕಲ್, ವೆಟ್, ಪೆಟ್ ಶಾಪ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಫೆ. 21. ಇಲ್ಲಿನ   ಶ್ರೀರಾಮ ಟವರ್ಸ್ ನಲ್ಲಿ  ಕಳೆದ 15  ವರ್ಷಗಳಿಂದ ವ್ಯವಹರಿಸುತ್ತಿರುವ ಶ್ರೀ  ಗಣೇಶ್ ಮೆಡಿಕಲ್ಸ್ ನ ಸರ್ಜಿಕಲ್, ವೆಟ್ ಆ್ಯಂಡ್ ಪೆಟ್ ವಿಸ್ಕೃತ ಹವಾ ನಿಯಂತ್ರಿತ ಔಷಧಾಲಯವು ಶನಿವಾರದಂದು ಶುಭಾರಂಭಗೊಂಡಿತು.

ಹಿರಿಯ ಕೃಷಿಕ ಬಿ.ಜಿ.ನಾರಾಯಣ ಭಟ್ ತೆಕ್ಕಡ್ಕ ಅವರು ದೀಪ ಬೆಳಗಿಸುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು. ಕಟ್ಟಡದ ಮಾಲಕ ಶಿವರಾಮ ಶೆಟ್ಟಿ ಕೇಪು, ಕಡಬ ಎಸ್‌.ಐ ರುಕ್ಮ ನಾಯ್ಕ್, ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಸೀತಾರಾಮ ಗೌಡ ಪೊಸವಳಿಕೆ, ರಮೇಶ್ ಕಲ್ಪುರೆ, ಪುಲಸ್ತ್ಯಾ ರೈ, ಮಹೇಶ್ ಕರಿಕ್ಕಳ, ಪಿ.ಪಿ ವರ್ಗೀಸ್, ಫಝಲ್ ಕೋಡಿಂಬಾಳ,   ಸಂಜೀವ ಶೆಟ್ಟಿ ಅತ್ಯಡ್ಕ, ಲೀಲಾ ಎಸ್. ಶೆಟ್ಟಿ, ವಿಠಲ ರೈ ಆಲಂಕಾರು, ಚಂದ್ರಹಾಸ ಶೆಟ್ಟಿ, ಅಮಿತಾ ಸಿ. ಶೆಟ್ಟಿ, ಡಾ|ಸಪ್ನಾ ಅಜಿತ್ ಶೆಟ್ಟಿ, ಗಣೇಶ್ ಕೈಕುರೆ, ಡಾ|ಬೇಬಿ ಮ್ಯಾಥ್ಯೂ, ಶುಭದಾ ಎಸ್. ರೈ, ವೆಂಕಟ್ರಮಣ ಭಟ್ ಸಂಗಾತಿ ಮುಂತಾದವರು ಉಪಸ್ಥಿತರಿದ್ದರು.  ಅತಿಥಿಗಳನ್ನು ಬರಮಾಡಿಕೊಂಡು ಮಾತನಾಡಿದ ಸಂಸ್ಥೆಯ ಮಾಲಕ  ಅಜಿತ್ ಶೆಟ್ಟಿ  ಅವರು ವಿಸ್ಕೃತ ಔಷಧಾಲಯದಲ್ಲಿ  ಅಲೋಪತಿ, ಆಯುರ್ವೇದ, ಸರ್ಜಿಕಲ್ಸ್, ಸಾಕುಪ್ರಾಣಿ, ಹೈನುಗಾರಿಕೆಗೆ ಸಂಬಂಧಪಟ್ಟ   (ವೆಟ್ ಆ್ಯಂಡ್ ಪೆಟ್ ) ಎಲ್ಲಾ ರೀತಿಯ ಔಷಧ ಸಾಮಾಗ್ರಿಗಳು ಲಭ್ಯವಿದೆ. ಕೋಳಿ ಸಾಕಣೆ, ಹೈನುಗಾರಿಕೆ, ಪ್ರಾಣಿ ಸಾಕಣೆ ಇವುಗಳಿಗೆ ಸಂಬಂಧಿಸಿದ ಸಲಹೆ, ಸೂಚನೆ, ವಿಷಯಾಧಾರಿತ ಮಾಹಿತಿ ಕೂಡಾ ಲಭ್ಯವಿರುತ್ತದೆ. ಹಾವು ಕಡಿತ, ಹೃದಯಾಘಾತ ಮುಂತಾದ ತುರ್ತು ಸಂದರ್ಭಗಳಿಗೆ ಬೇಕಾದ ಔಷಧಗಳು ಕೂಡ ನಮ್ಮಲ್ಲಿ ಲಭ್ಯವಿದ್ದು,  ನಮ್ಮಲ್ಲಿ ಲಭ್ಯವಿಲ್ಲದ ಔಷಧಗಳನ್ನು  24ಗಂಟೆಯ ಒಳಗೆ ತರಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.

Also Read  ಉಗ್ರ ಪರ ಗೋಡೆ ಬರಹ ಪ್ರಕರಣ ➤ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ ಎನ್‌ಐಎ

error: Content is protected !!
Scroll to Top