ದ.ಕ- ಕೇರಳ ಗಡಿ ಪ್ರವೇಶಕ್ಕೆ ನಾಲ್ಕು ಗಡಿಗಳ ಮೂಲಕ ಮಾತ್ರವೇ ಅವಕಾಶ ➤ ದ.ಕ ಜಿಲ್ಲಾಧಿಕಾರಿ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ 21. ನಾಳೆಯಿಂದ ಕೇರಳದಿಂದ ಜಿಲ್ಲೆಗೆ ಪ್ರವೇಶಿಸುವವರು ಕೇವಲ ನಾಲ್ಕು ಗಡಿ ಮಾರ್ಗಗಳ ಮುಖಾಂತರ ಮಾತ್ರ ಪ್ರವೇಶ ಮಾಡಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.


ಕೇರಳದಲ್ಲಿ ಕೋವಿಡ್ 19 ಹೆಚ್ಚಾಗುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತೆ ಈ ನಿಯಮವನ್ನು ಜಾರಿಗೊಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರವೇಶಕ್ಕೆ ತಲಪಾಡಿ, ಸಾರಡ್ಕ, ಮೇನಾಲ ಮತ್ತು ಜಾಲ್ಸೂರು ಈ ನಾಲ್ಕು ಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಗಡಿಗಳು ನಾಳೆಯಿಂದ (ಫೆ.22) ಬಂದ್ ಆಗಿರಲಿದೆ ಎಂದು ಹೇಳಿದ್ದಾರೆ. ಕೇರಳದಿಂದ ಜಿಲ್ಲೆಗೆ ಆಗಮಿಸುವ ಎಲ್ಲಾ ಪ್ರಯಾಣಿಕರು ಕೋವಿಡ್- 19 ನೆಗೆಟಿವ್ ವರದಿ ರಿಪೋರ್ಟ್ ಕಡ್ಡಾಯ. ಗಡಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸಲಿದ್ದಾರೆ.

Also Read  ನವೆಂಬರ್ 27ರವರೆಗೆ ಕರ್ನಾಟಕದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

error: Content is protected !!
Scroll to Top