ಸುಳ್ಯ: ಅಟೋರಿಕ್ಷಾ ಹಾಗೂ ಆಂಬ್ಯುಲೆನ್ಸ್ ನಡುವೆ ಢಿಕ್ಕಿ ➤ ಅಟೋ ಚಾಲಕ ಗಂಭೀರ



(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 21.‌ ಆಂಬುಲೆನ್ಸ್ ಹಾಗೂ ಆಟೋರಿಕ್ಷಾ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಹಳೆಗೇಟು ಮೊಗರ್ಪಣೆ ಸಮೀಪ ಭಾನುವಾರದಂದು ನಡೆದಿದೆ.






ಗಾಯಾಳುವನ್ನು ಜಲೀಲ್ ಎಂದು ಗುರುತಿಸಲಾಗಿದೆ. ಮಂಗಳೂರು ಮೂಲದ ಗಣೇಶ್ ಹೆಸರಿನ ಆಂಬುಲೆನ್ಸ್ ವಾಹನವೊಂದು ಮಂಗಳೂರಿನಿಂದ ರೋಗಿಯೊಬ್ಬರನ್ನು ಮಡಿಕೇರಿಗೆ ಕೊಂಡೊಯ್ದು ಹಿಂತಿರುಗುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಆಟೋ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು, ಅಟೋ ಚಾಲಕ ಜಲೀಲ್ ಎಂಬವರ ತಲೆ ಮತ್ತು ಕೈಕಾಲುಗಳಿಗೆ ತೀವ್ರತರದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.






error: Content is protected !!
Scroll to Top