? ಸೌದೆ ತರಲೆಂದು ತೋಟಕ್ಕೆ ತೆರಳಿದ್ದ ಬಾಲಕನನ್ನು ತಿಂದು ತೇಗಿದ ಹುಲಿ..!

(ನ್ಯೂಸ್ ಕಡಬ) newskadaba.com ಮಡಿಕೇರಿ, ಫೆ. 21. ಕಾಫುತೋಟಕ್ಕೆ ಸೌದೆ ತರಲೆಂದು ತೆರಳುತ್ತಿದ್ದ ಬಾಲಕನನ್ನು ಹುಲಿಯೊಂದು ಕೊಂದು ಹಾಕಿರುವ ಘಟನ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಎಂಬಲ್ಲಿ ನಡೆದಿದೆ.


ಮೃತ ಬಾಲಕನನ್ನು 8ನೇ ತರಗತಿ ವಿದ್ಯಾರ್ಥಿ ಅಯ್ಯಪ್ಪ (14) ಎಂದು ಗುರುತಿಸಲಾಗಿದೆ. ಈತ ಕೋಟ್ರಂಗಡ ಅಶ್ವತ್ ಎಂಬವರ ಕಾಫಿ ತೋಟದಲ್ಲಿ ಸೌದೆಗಾಗಿ ತೆರಳುತ್ತಿದ್ದ ಸಂದರ್ಭ ಹುಲಿಯೊಂದು ಆತನ ಮೇಲೆರಗಿ ದಾಳಿ ನಡೆಸಿದೆ, ಪರಿಣಾಮ ಬಾಲಕ ದಾರುಣವಾಗಿ ಮೃತಪಟ್ಟಿದ್ದಾನೆ. ಕಳೆದ ಕೆಲ ಸಮಯಗಳಿಂದ ದ.ಕೊಡಗಿನಾದ್ಯಂತ ನಿರಂತರವಾಗಿ ಜಾನುವಾರುಗಳನ್ನು ಬಲಿ ಪಡೆಯುತ್ತಿದ್ದ ಹುಲಿಯು ಇದೀಗ ನರಬಲಿ ಪಡೆದಿರೋದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಜನರು ಅರಣ್ಯ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read  ಬೆಂಗಳೂರು: ಅಕ್ರಮ ವಜ್ರ ಸಾಗಾಟ ➤ಕಡಬದ ವ್ಯಕ್ತಿಯ ಸಹಿತ ಮೂವರ ಬಂಧನ

error: Content is protected !!
Scroll to Top