? ಗಂಟಲು ಸೀಳಿ, ಕಾರು ಚಲಾಯಿಸಿ ಪತ್ನಿಯ ಕೊಲೆಗೈದ ಪತಿ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಚೆನ್ನೈ, ಫೆ. 21. ಪತಿಯೋರ್ವ ಪತ್ನಿಯ ಗಂಟಲು ಸೀಳಿ, ಆಕೆಯ ಮೇಲೆ ಕಾರು ಚಲಾಯಿಸಿ ಕೊಲೆಗೈದ ಘಟನೆ ಕಾಂಚಿಪುರಂ ಜಿಲ್ಲೆಯಲ್ಲಿ ನಡೆದಿದೆ.


ಕೊಲೆಗೀಡಾದವರನ್ನು ಕೀರ್ತನಾ (28) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಡಾ.ಗೋಕುಲ್ ಕುಮಾರ್ ಎಂದು ತಿಳಿದು ಬಂದಿದೆ. ದಂಪತಿಗಳ ನಡುವೆ ನಿರಂತರ ಜಗಳವಾಗುತ್ತಲೇ ಇತ್ತು ಎನ್ನಲಾಗಿದೆ. ಲಾಕ್ ಡೌನ್ ವೇಳೆ ಇಬ್ಬರೂ ಮನೆಯಲ್ಲೇ ಇದ್ದು, ಇವರ ನಡುವೆ ಕಲಹವೇರ್ಪಟ್ಟು ವಿಚ್ಚೇದನ ಪಡೆಯುವಲ್ಲಿಗೂ ತಲುಪಿತ್ತು. ಇವರಿಬ್ಬರ ನಡುವಿನ ಕಲಹದಲ್ಲಿ ಪತಿ ಗೋಕುಲ್ ಸಿಟ್ಟಿನಿಂದ ಪತ್ನಿಯ ಗಂಟಲನ್ನು ಚಾಕುವಿನಿಂದ ಸೀಳಿದ್ದು, ಆಕೆಯ ರಕ್ಷಣೆಗೆಂದು ಹೋದ ಕೀರ್ತನಾ ತಂದೆಗೂ ಹಲ್ಲೆ ನಡೆಸಿ, ಕೀರ್ತನಾಳನ್ನು ಮನೆಯಿಂದ ಹೊರಗೆ ತಳ್ಳಿಹಾಕಿ ನಂತರ ಆಕೆಯ ಮೇಲೆ ಕಾರು ಚಲಾಯಿಸಿದ್ದಾನೆ. ಇದನ್ನು ಗಮನಿಸಿದ ನೆರೆಹೊರೆಯವರು ತಂದೆ ಹಾಗೂ ಮಗಳ ರಕ್ಷಣೆಗೆ ಮುಂದಾಗಿದ್ದರೂ ಅದಾಗಲೇ ಕೀರ್ತನಾ ಮೃತಪಟ್ಟಿದ್ದಳು. ಆರೋಪಿ ಭಯದಿಂದ ಕಾರು ಚಲಾಯಿಸಿಕೊಂಡು ಹೋಗಿದ್ದು, ನೆರೆಹೊರೆಯವರ ಮಾಹಿತಿಯನ್ನು ಆಧರಿಸಿ ಪರಾರಿಯಾಗುತ್ತಿದ್ದ ಆತನನ್ನು ಪೊಲೀಸರು ಹೆದ್ದಾರಿಯಲ್ಲಿ ಬಂಧಿಸಿದ್ದಾರೆ.

Also Read  ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

error: Content is protected !!
Scroll to Top