ಸುಬ್ರಹ್ಮಣ್ಯ: ಫೆ. 24ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದಿಂದ ಮಠದ ಸ್ವಾಮೀಜಿಯವರನ್ನು ಕೈಬಿಟ್ಟ ಸಂಘಟಕರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ. 21. ಫೆ. 24ರಂದು ಇಲ್ಲಿನ ವಲ್ಲೀಶ ಸಭಾ ಭವನದಲ್ಲಿ ನಡೆಯಲಿರುವ ಕಡಬ ತಾಲೂಕಿನ ಎರಡನೇ ಸಾಹಿತ್ಯ ಸಮ್ಮೇಳನದಿಂದ ಸಮ್ಮೇಳನದ ಗೌರವಾಧ್ಯಕ್ಷ ಸಂಪುಟ ನರಸಿಂಹ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಕೈಬಿಡಲಾಗಿದ್ದು, ಇದೀಗ ಅಭಿಮಾನಿಗಳಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿದೆ.


ಧಾರ್ಮಿಕ ಸಾಹಿತ್ಯದ ಮೂಲಕ ತನ್ನದೇ ಕೊಡುಗೆ ನೀಡುತ್ತಾ ಬಂದಿರುವ ಸ್ವಾಮೀಜಿಯವರಿಗೆ ಸಮಿತಿಯಲ್ಲಿ ಗೌರವಾಧ್ಯಕ್ಷ ಸ್ಥಾನ ನೀಡಿ, ಬಳಿಕ ಅಗೌರವ ತೋರಿದ್ದಲ್ಲದೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಅವರ ಕಾರ್ಯ ಕ್ಷೇತ್ರದಲ್ಲಿ ಅವಮಾನ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Also Read  ಬಂಡೆಕಲ್ಲಿಗೆ ದೋಣಿ ಬಡಿದು ಮೀನುಗಾರನ ದಾರುಣ ಅಂತ್ಯ

error: Content is protected !!
Scroll to Top