ರಾಜ್ಯ ಅಲ್ಪಸಂಖ್ಯಾತರ ಕಾಂಗ್ರೆಸ್ ಘಟಕದ ಸಂಯೋಜಕರಾಗಿ ತಾಜ್ ಮಹಮ್ಮದ್ ಸಂಪಾಜೆ ನೇಮಕ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 20. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಸಂಯೋಜಕರಾಗಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ತಾಜ್ ಮಹಮ್ಮದ್ ಸಂಪಾಜೆಯವರನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜನಾಬ್ ನದೀಮ್ ಜಾವೇದರ ಅನುಮೋದನೆಯೊಂದಿಗೆ ರಾಜ್ಯ ಅಲ್ಪಸಂಖ್ಯಾತ ಘಟಕದ ಉಸ್ತುವಾರಿ ಡಾ.ಜಾಫರ್ ಅಹ್ಮದ್ ಖಾನ್ ಮತ್ತು ಡಿ.ಕೆ.ಶಿವಕುಮಾರ್ ರವರ ಅಂಗೀಕಾರದೊಂದಿಗೆ ರಾಜ್ಯ ಅಲ್ಪಸಂಖ್ಯಾತ ಘಟಕದ ಚೇರ್ ಮೇನ್ ಸಯ್ಯದ್ ಅಹಮದ್ ನೇಮಕಗೊಳಿಸಿದರು.


ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳೆ, ಸಲೀಮ್ ಅಹಮದ್, ರಾಮಲಿಂಗ ರೆಡ್ದಿ, ಧ್ರುವನಾರಾಯಣರೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿ ಕೊಳ್ಳಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಶಕ್ತಿ ತುಂಬಿಸಲು ಸೂಚಿಸಿದ್ದಾರೆ. ಇವರನ್ನು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ತೆಕ್ಕಿಲ್ ರವರ ಶಿಫಾರಸ್ಸು ಮಾಡಿದರು. ತಾಜ್ ಮಹಮ್ಮದ್ ಸಂಪಾಜೆಯವರು ಲಯನ್ಸ್ ಕ್ಲಬ್ ಅಧ್ಯಕ್ಷ ರಾಗಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ಸುಳ್ಯ ತಾಲ್ಲೂಕು ಮದರಸ ಮ್ಯಾನೇಜ್‌ ಮೆಂಟ್ ಅಧ್ಯಕ್ಷರಾಗಿಯೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

Also Read  ಉಪ್ಪಿನಂಗಡಿ, ಮುಂಡಾಜೆಯಲ್ಲಿ ತಡವಾಗಿ ಆರಂಭವಾದ ಮತದಾನ ​► ಹೆಚ್ಚುವರಿ ಸಮಯಾವಕಾಶ‌ ನೀಡಲು ಆಗ್ರಹ

error: Content is protected !!
Scroll to Top