ಉಪ್ಪಿನಂಗಡಿ: ರಸ್ತೆ ಬದಿಯ ಕಮರಿಗೆ ಉರುಳಿದ ಕಾರು ➤ ಪ್ರಯಾಣಿಕರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.20. ಚಾಲಕನ ನಿಯಂತ್ರಣ ತಪ್ಪಿದ ಹ್ಯುಂಡೈ ಐ20 ಕಾರೊಂದು ರಸ್ತೆ ಬದಿಯ 20 ಅಡಿ ಆಳದ ಕಮರಿಗೆ ಉರುಳಿ ಬಿದ್ದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ಶನಿವಾರದಂದು ನಡೆದಿದೆ.

ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಬುಡೋಳಿ‌ ಸಮೀಪ ರಸ್ತೆ ಬದಿಯ ಬೃಹತ್ ಹೊಂಡಕ್ಕೆ ಉರುಳಿ ಬಿದ್ದಿದೆ. ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಬುಡೋಳಿ ಯೂತ್ ಫೇಡರೇಶನ್ ಮತ್ತು ಸೈಲೆಂಟ್ ಫ್ರೆಂಡ್ಸ್ ಬುಡೋಳಿ ಇದರ ಸದಸ್ಯರು ಗಾಯಾಳುಗಳನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು.

Also Read  ಮದ್ರಸಾ ಶಿಕ್ಷಕನಿಂದ ಲೈಂಗಿಕ ಕಿರುಕುಳ..! ➤ ಆರೋಪಿ ಅರೆಸ್ಟ್

 

 

error: Content is protected !!
Scroll to Top