ರೈತರಿಂದ ಆಕ್ಷೇಪಣೆಗಳಿಗೆ ಫಸಲ್ ಭಿಮಾ ಯೋಜನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 20. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ(PMFBY) ಅಡಿಯ 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ರೈತರ ಬೆಳೆ ವಿಮೆಗೆ ನೋಂದಣೆಯಾದ ಪ್ರಸ್ತಾವನೆಗಳೊಂದಿಗೆ ಹೋಲಿಕೆ ಮಾಡಿ ಸರ್ಕಾರದಿಂದ ಅನುಮೋದನೆಯಾದ ವಿನಾಯಿತಿಗಳನ್ನು ಅಳವಡಿಸಿ ತಾಳೆಯಾಗಿರುವ ಪ್ರಸ್ತಾವನೆಗಳಿಗೆ ಸಂರಕ್ಷಣೆ ತಂತ್ರಾಂಶದಲ್ಲಿ ವಿಮಾ ಪರಿಹಾರ ಲೆಕ್ಕ ಹಾಕಲಾಗಿದೆ.


ತಾಳೆ ಆಗಲಾರದೆ ಇರುವ ಪ್ರಸ್ತಾವನೆಗಳನ್ನು ಸರ್ಕಾರದ ಆದೇಶದಂತೆ ಸಂಬಂಧಪಟ್ಟ ತಾಲೂಕು ಮಟ್ಟದ ಕೃಷಿ ಅಧಿಕಾರಿಗಳಿಗೆ ಪರಿಶೀಲಿಸಲು ತಂತ್ರಾಶದ ಮೂಲಕ ಕಳುಹಿಸಲಾಗಿದ್ದು, ಪ್ರಸ್ತಾವನೆಯನ್ನು ಪರಿಶೀಲಿಸಿ ಸಂಬಂಧಪಟ್ಟ ವಿಮಾ ಸಂಸ್ಥೆಯವರಿಗೆ ವರ್ಗಾಯಿಸಿ ಅಂತಿಮವಾಗಿ ಸಂಸ್ಥೆಯವರು ಪ್ರಸ್ತಾವನೆಯನ್ನು ಅನುಮೋದನೆ ಹಾಗೂ ತಿರಸ್ಕರಿಸಿರುತ್ತಾರೆ. ಪ್ರಸ್ತುತ ವಿಮಾ ಸಂಸ್ಥೆಯಿಂದ ತಿರಸ್ಕತಗೊಂಡ ನೀರುಮಾರ್ಗ ಪಂಚಾಯಿತಿಯ ಮೂರು ಪ್ರಸ್ತಾವನೆಗಳನ್ನು ಗುರುಪುರ ಹೋಬಳಿ ರೈತ ಸಂಪರ್ಕ ಕೇಂದ್ರದ ಸೂಚನಾಫಲಕಕ್ಕೆ ಲಗತ್ತಿಸಿ ಪ್ರಚಾರ ಪಡಿಸಲಾಗಿದೆ. ಫೆಬ್ರವರಿ 15ರಿಂದ ಮಾರ್ಚ್ 4 ರವರೆಗೆ 15 ದಿನಗಳ ಒಳಗೆ ರೈತರು ಅವರ ವಿಮಾ ಅರ್ಜಿ ತಿರಸ್ಕತಗೊಂಡ ಬಗ್ಗೆ ಮನವರಿಕೆ ಮಾಡಿಕೊಂಡು ಆಕ್ಷೇಪಣೆ ಇದ್ದಲ್ಲಿ ಮರುಪರಿಶೀಲಿಸಲು ರೈತರ ಮನವಿಗಳನ್ನು ಸಂಬಂಧಿಸಿರುವ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಮಂಗಳೂರು ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ರೈಲು ಹತ್ತುವ ವೇಳೆ ಚಿನ್ನಾಭರಣ ಕಳವು ➤ ಆರೋಪಿಗಳ ಬಂಧನ

error: Content is protected !!
Scroll to Top