ದ.ಕ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಡಾ. ಕುಮಾರ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 20. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿ ಡಾ. ಕುಮಾರ್ ಅವರು ಶುಕ್ರವಾರದಂದು ಅಧಿಕಾರ ವಹಿಸಿಕೊಂಡರು.


ಅವರು ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ 2018ರ ಮಾರ್ಚ್ 21 ರಿಂದ 2018 ರ ಜೂನ್ 26 ರವರೆಗೆ ಹಾಗೂ 2019ರ ಫೆಬ್ರವರಿ 15 ರಿಂದ 2021ರ ಫೆಬ್ರವರಿ 17 ರವರೆಗೆ ಕಾರ್ಯನಿರ್ವಹಿಸುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸಹ 2015ರ ಆಗಸ್ಟ್ 12 ರಿಂದ 2018ರ ಮಾರ್ಚ್ 17ರ ವರೆಗೆ ಹಾಗೂ 2018 ರ ಜೂನ್ 29 ರಿಂದ 2019 ಫೆಬ್ರವರಿ 13 ರವರೆಗೆ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.

Also Read  ಅರಂತೋಡು: ಕಾರಿನೆದುರು ನಿಂತು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಯುವಕ ಸ್ಥಳದಲ್ಲೇ ಮೃತ್ಯು ► ಅಮಾಯಕ ಯುವಕನ ಪ್ರಾಣಕ್ಕೆ ಮುಳುವಾದ ತನ್ನದೇ ತಂಡದ ಯುವಕ

error: Content is protected !!
Scroll to Top