ಕಾರಿನಲ್ಲಿ ಕೋಕೇನ್ ಸಾಗಾಟ ➤ ಬಿಜೆಪಿ ನಾಯಕಿ ಅರೆಸ್ಟ್



(ನ್ಯೂಸ್ ಕಡಬ) newskadaba.com ಪಶ್ಚಿಮ ಬಂಗಾಳ, ಫೆ. 20. ಬಿಜೆಪಿಯ ಯುವ ನಾಯಕಿ ಪಮೇಲಾ ಗೋಸ್ವಾಮಿ ಅವರನ್ನು ಕಾರಿನಲ್ಲಿ ಕೊಕೇನ್(ಮಾದಕ ದ್ರವ್ಯ) ಸಾಗಿಸುತ್ತಿದ್ದ ಆರೋಪದಡಿ ಪೊಲೀಸರು ಶುಕ್ರವಾರದಂದು ಬಂಧಿಸಿದ್ದಾರೆ.





ಬಿಜೆಪಿ ಯುವ ನಾಯಕಿಯಾಗಿರುವ ಪಮೇಲಾ ಗೋಸ್ವಾಮಿ ಮತ್ತು ಅವರ ಸ್ನೇಹಿತ ಪ್ರೋಬೀರ್‌ ಕುಮಾರ್‌ ಡೇ ಅವರನ್ನು ಕಲ್ಕತ್ತಾದ ನ್ಯೂ ಅಲಿಪುರ್‌ ಪ್ರದೇಶದ ಎನ್‌.ಆರ್‌ ಅವೆನ್ಯೂ ಎಂಬಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಅವರು ತಮ್ಮ ಕಾರಿನಲ್ಲಿ ಕೊಕೇನ್ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.






error: Content is protected !!
Scroll to Top