ಗೋಕರ್ಣ: ಮೀನುಗಾರಿಕಾ ದೋಣಿ ಮುಳುಗಡೆ ➤ 14 ಮಂದಿ ಮೀನುಗಾರರ ರಕ್ಷಣೆ

(ನ್ಯೂಸ್ ಕಡಬ) newskadaba.com ಗೋಕರ್ಣ, ಫೆ. 19. ಮೀನುಗಾರಿಕೆಗೆಂದು ತೆರಳಿದ್ದ ದುರ್ಗಾ ಭೈರವಿ ಹೆಸರಿನ ದೋಣಿಯೊಂದು ಆಳ ಸಮುದ್ರದಲ್ಲಿ ಮುಳುಗಿದ ಘಟನೆ ಗೋಕರ್ಣದಲ್ಲಿ ನಡೆದಿದೆ.


ಘಟನೆಯಲ್ಲಿ ದೋಣಿಯಲ್ಲಿದ್ದ 14 ಮೀನುಗಾರರನ್ನು ರಕ್ಷಿಸಲಾಗಿದೆ. ಘಟನೆಯಿಂದಾಗಿ ಸುಮಾರು 25 ಲಕ್ಷ ರೂ. ಹಾನಿ ಸಂಭವಿಸಿದೆ. 14 ಮಂದಿ ತದಡಿ ಬಂದರಿನಿಂದ ಬುಧವಾರ ಆಳ ಸಮುದ್ರಕ್ಕೆ ಮೀನುಗಾರಿಕೆಗೆಂದು ತೆರಳಿದ್ದು, ಶುಕ್ರವಾರದಂದು ಹಿಂತಿರುಗುತ್ತಿದ್ದ ವೇಳೆ ದೋಣಿಯು ಮುಳುಗಲಾರಂಭಿಸಿತು. ಈ ಸಂದರ್ಭ ಸಮೀಪದಲ್ಲಿದ್ದ ‘ಸರ್ವಲಕ್ಷ್ಮಿ’ ಎಂಬ ಹೆಸರಿನ ದೋಣಿಯಲ್ಲಿದ್ದವರಿಗೆ ವೈರ್‌ ಲೆಸ್ ಮೂಲಕ ವಿಷಯ ತಿಳಿಸಲಾಯಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ಅವರು ದೋಣಿಯಲ್ಲಿದ್ದವರನ್ನ ರಕ್ಷಿಸಿದ್ದಾರೆ. ಮುಳುಗಿದ ದೋಣಿಯಲ್ಲಿ ವಿವಿಧ ಕಡೆಯ ಮೀನುಗಾರರಿದ್ದರು ಎನ್ನಲಾಗಿದೆ.

Also Read  ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಮಾ. 15ರಂದು ಚುನಾವಣೆ

error: Content is protected !!
Scroll to Top