ನಾಳೆ (ಫೆ.20) ಕಡಬದಲ್ಲಿ ಶ್ರೀ ಗಣೇಶ್ ಮೆಡಿಕಲ್ಸ್, ವೆಟ್ & ಪೆಟ್ ಶಾಪ್ ಶುಭಾರಂಭ ➤ ಕಡಬದ ಏಕೈಕ ಸುಸಜ್ಜಿತ ಹವಾನಿಯಂತ್ರಿತ ಮಳಿಗೆ

(ನ್ಯೂಸ್ ಕಡಬ) newskadaba.com ಕಡಬ, ಫೆ.19. ಕಳೆದ 15 ವರ್ಷಗಳಿಂದ ಕಡಬದ ಶ್ರೀರಾಮ್ ಟವರ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಗಣೇಶ್ ಮೆಡಿಕಲ್ಸ್ ನ ಸಹ ಸಂಸ್ಥೆ ಶ್ರೀ ಗಣೇಶ್ ಮೆಡಿಕಲ್ಸ್ , ವೆಟ್ & ಪೆಟ್ ಶಾಪ್ ನಾಳೆ (ಫೆ‌.20) ಕಡಬದಲ್ಲಿ ಶುಭಾರಂಭಗೊಳ್ಳಲಿದೆ.

ನೂತನ ಸಂಸ್ಥೆಯಲ್ಲಿ ಕೋಳಿ ಸಾಕಾಣಿಕೆ, ಹೈನುಗಾರಿಕೆ, ಪ್ರಾಣಿ ಸಾಕಾಣಿಕೆಗೆ ಸಂಬಂಧಿಸಿದ ಎಲ್ಲಾ ಆರೋಗ್ಯ ಸಾಮಾಗ್ರಿಗಳು, ಔಷಧಿಗಳು ಲಭ್ಯ ಇರಲಿದ್ದು, ಜೊತೆಗೆ ಕೋಳಿ ಸಾಕಾಣಿಕೆ, ಹೈನುಗಾರಿಕೆ, ಪ್ರಾಣಿ ಸಾಕಾಣಿಕೆಗೆ ಸಂಬಂಧಿಸಿದ ಸಲಹೆ, ಸೂಚನೆ, ವಿಷಯಾಧಾರಿತ ಮಾಹಿತಿಗಾಗಿ ವಿಶೇಷ ಕೌಂಟರ್ ತೆರೆಯಲಾಗಿದೆ.

ಹಾವು ಕಡಿತ, ಹೃದಯಾಘಾತ ಮೊದಲಾದ ತುರ್ತು ಸಂದರ್ಭದಲ್ಲಿ ಬೇಕಾಗುವಂತಹ ಔಷಧಗಳು ಲಭ್ಯವಿದ್ದು, ತಕ್ಷಣಕ್ಕೆ ಲಭ್ಯವಿರದ ಎಲ್ಲಾ ರೀತಿಯ ಔಷಧಿಗಳನ್ನು 24 ಗಂಟೆಗಳಲ್ಲಿ ತರಿಸಿ ಕೊಡುವ ವ್ಯವಸ್ಥೆಯನ್ನು ಗ್ರಾಹಕರಿಗೆ ಕಲ್ಪಿಸಲಾಗಿದೆ. ಕಡಬ ತಾಲೂಕಿನ ಏಕೈಕ ಸರ್ವ ಸುಸಜ್ಜಿತ ಹವಾನಿಯಂತ್ರಿತ ವಿಶಾಲವಾದ ಔಷಧಾಲಯದಲ್ಲಿ ಶುಭಾರಂಭದ ಪ್ರಯುಕ್ತ ಪ್ರತೀ ಖರೀದಿಯ ಮೇಲೆ 10% ವರೆಗೆ ರಿಯಾಯಿತಿ ಇರಲಿದ್ದು, ಗ್ರಾಹಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಾಲಕರಾದ ಅಜಿತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌. ಹೆಚ್ಚಿನ ಮಾಹಿತಿಗಾಗಿ 9449244259 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಸಂಪತ್‌ ಕುಮಾರ್‌ ಕೊಲೆ ಪ್ರಕರಣ ➤ ಆರೋಪಿಗಳು ಖಾಕಿ ಬಲೆಗೆ

error: Content is protected !!
Scroll to Top