? ಫಳ್ನೀರ್: ಶೂಟೌಟ್ ಪ್ರಕರಣ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 19. ಇಲ್ಲಿ‌ ಫಳ್ನೀರ್‌ ಎಂಬಲ್ಲಿ ರಿವಾಲ್ವಾರ್‌ ನಿಂದ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಉಳ್ಳಾಲ ನಿವಾಸಿಗಳಾದ ಮುಹಮ್ಮದ್ ಸಮೀರ್ (29) ಹಾಗೂ ಮುಹಮ್ಮದ್ ಅರ್ಫಾನ್ (23) ಎಂದು ಗುರುತಿಸಲಾಗಿದೆ. ಇವರಿಗೆ 2020ರ ಅಕ್ಟೋಬರ್ 30ರಂದು ಸಂಜೆ 5 ಗಂಟೆ ವೇಳೆಗೆ ಫಳ್ನೀರ್‌ ನ ಹೊಟೇಲೊಂದರ ಸಿಬ್ಬಂದಿಯ ಜೊತೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭ ಆರೋಪಿಗಳು ರಿವಾಲ್ವಾರ್‌ ನಿಂದ ಗುಂಡು ಹಾರಿಸಿದ ಪರಿಣಾಮ ಹೋಟೆಲ್ ಸಿಬ್ಬಂದಿ ಗಾಯಗೊಂಡಿದ್ದರು. ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊನೆಗೂ ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Also Read  ರಾಜ್ಯದಲ್ಲಿ ಇಂದು 55 ಮಂದಿಗೆ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 1,147ಕ್ಕೆ ಏರಿಕೆ

error: Content is protected !!
Scroll to Top