ಕಡಬ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ. 19. ಫೆ./24ರಂದು ವಲ್ಲೀಶ ಸಭಾಭವನದಲ್ಲಿ ನಡೆಯಲಿರುವ ಕಡಬ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕಯನ್ನು ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ರಾಜೇಶ್ ಎನ್.ಎಸ್ ಅವರು ಸುಬ್ರಹ್ಮಣ್ಯ ಕೆಎಸ್.ಎಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಕಡಬ ತಾಲೂಕು ಸಾಹಿತ್ಯ ಪರಿಷತ್ ಜನಾರ್ಧನ ಗೌಡ ಪಣೆಮಜಲು, ಸ್ವಾಗತ ಸಮಿತಿ ಪದಾಧಿಕಾರಿಗಳಾದ ಸತೀಶ್ ಕಡಬ, ವಿಶ್ವನಾಥ ನಡುತೋಟ, ಗ್ರೇಸಿ ಪಿಂಟೋ, ಲೋಕೇಶ್ ಬಿ.ಎನ್, ಎಸ್.ಎಸ್ ಪಿಯು ಪ್ರಾಂಶುಪಾಲೆ ಸಾವಿತ್ರಿ ಕೆ ಹಾಗೂ ಯಶವಂತ ರೈ ಮೊದಲಾದವರು ಉಪಸ್ಥಿತರಿದ್ದರು. ಕೆ.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲ ಪ್ರೊ/ ಉದಯಕುಮಾರ್ ಸ್ವಾಗತಿಸಿ, ಸ್ವಾಗತ ಸಮಿತಿಯ ವಿಶ್ವನಾಥ ಎನ್ ವಂದಿಸಿದರು.

Also Read  ಇಂದಿನ ಚಿನ್ನದ ದರ

error: Content is protected !!
Scroll to Top