ಪೇರಡ್ಕ: ನೂತನ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ಜಿ.ಕೆ ಹಮೀದ್ ರವರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಪೇರಡ್ಕ, ಫೆ. 19. ಸಂಪಾಜೆ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪೇರಡ್ಕ ಮುಹಿಯದ್ದೀನ್ ಜಮಾಅತ್ ಕಮಿಟಿ ಮಾಜಿ ಕಾರ್ಯದರ್ಶಿ ಜಿ.ಕೆ. ಹಮೀದ್ ರವರನ್ನು ಪೇರಡ್ಕ ಮುಹಿಯದ್ದೀನ್ ಜಮಾಅತ್ ಕಮಿಟಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪೇರಡ್ಕ ಜಮಾಅತ್ ಅಧ್ಯಕ್ಷರಾದ ಎಸ್.ಅಲಿ ಹಾಜಿ, ಖತೀಬರಾದ ಸುಹೈಲ್ ದಾರಿಮಿ, ಕಾರ್ಯದರ್ಶಿ ರಝಾಕ್ ಹಾಜಿ, ಸದರ್ ಉಸ್ತಾದ್ ಝಕಾರಿಯಾ ದಾರಿಮಿ, ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಕರಾವಳಿ, ರಝಾಕ್ ಹಾಜಿ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಹಕೀಮ್ ಪೇರಡ್ಕ, ಇಬ್ರಾಹಿಂ ಸೆಟ್ಯಡ್ಕ, ಮೊಯಿದು ದರ್ಕಾಸ್, ಟಿ.ಬಿ. ಹನೀಫ್, ತಾಜುದ್ದೀನ್ ಟರ್ಲಿ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top