? ಕಾಟಿಪಳ್ಳ ಪಿಂಕಿ ನವಾಝ್ ಕೊಲೆಯತ್ನ ಪ್ರಕರಣ ➤ 9 ಮಂದಿ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 19. ಕಾಟಿಪಳ್ಳದ ಯುವಕ ಪಿಂಕಿ ನವಾಝ್ ಕೊಲೆಯತ್ನ‌ದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಕಾಟಿಪಳ್ಳ‌ ನಿವಾಸಿಗಳಾದ ಪ್ರಕಾಶ್ ಭಂಡಾರಿ (29), ಶಾಕೀಬ್ (29) ಕೃಷ್ಣಾಪುರ ನಿವಾಸಿ ಶೈಲೇಶ್ ಪೂಜಾರಿ (19), ಹನೀಫ್ (20), ಸುವಿನ್ ಕಾಂಚನ್ (23), ಲಕ್ಷ್ಮೀಶ್ (26), ಅಹ್ಮದ್ ಸಾದಿಕ್ (23), ನಿಸಾರ್ ಹುಸೈನ್(29) ಹಾಗೂ ರಂಜನ್ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಫೆಬ್ರವರಿ 10ರಂದು ಸಂಜೆ ವೇಳೆ ಕಾಟಿಪಳ್ಳದ 2ನೇ ಬ್ಲಾಕ್‌ ನಲ್ಲಿರುವ ಟಿಕ್‌- ಟಾಕ್ ಗಾರ್ಡನ್ ಬಳಿ ಪಿಂಕಿ ನವಾಜ್ ಎಂಬವರಿಗೆ ಸ್ವಿಫ್ಟ್ ಕಾರಿನಲ್ಲಿ ಬಂದ ಆರೋಪಿಗಳು ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಕೊಲೆಗೆ ಯತ್ನಿಸಿದ್ದರು. ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ತನಿಖೆಯನ್ನು ಕೈಗೊಂಡ ಪೊಲೀಸರು ಕೊಲೆಯತ್ನದ ನಾಲ್ವರು ಆರೋಪಿಗಳು ಹಾಗೂ ಈ ಕೃತ್ಯಕ್ಕೆ ಸಹಕರಿಸಿದ್ದಾರೆ ಎಂಬ ಆರೋಪದಲ್ಲಿ ಐವರನ್ನು ಬಂಧಿಸಿದ್ದಾರೆ. ಆರೋಪಿಗಳ ಜೊತೆಗೆ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಹಳೆ ದ್ವೇಷದಿಂದ ಈ ಕೃತ್ಯ ನಡೆಸಿರುವುದು ತನಿಖೆಯ ಮೇಳೆ ತಿಳಿದುಬಂದಿದೆ.

Also Read  ಕಡಬದ ಶ್ರೀ ಮೋಟಾರ್ಸ್ ನಲ್ಲಿ ಬೃಹತ್ ಸಾಲ ಹಾಗೂ ಎಕ್ಸ್‌ಚೇಂಜ್ ಮೇಳ ➤ ಕೇವಲ 999 ರೂ. ಪಾವತಿಸಿ ಯಮಹಾ ದ್ವಿಚಕ್ರ ವಾಹನ ನಿಮ್ಮದಾಗಿಸಿ

error: Content is protected !!
Scroll to Top