ಸಿಡಿಲು ಬಡಿದು ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 19. ರಾಜ್ಯದ ಹಲವು ಕಡೆಗಳಲ್ಲಿ ಗುರುವಾರದಂದು ಸುರಿದ ಭಾರೀ ಗುಡುಗು ಮಳೆಗೆ ಯುವಕನೋರ್ವ ಸಿಡಿಲು ಬಡಿದು ಮೃತಪಟ್ಟ ಘಟನೆ ಬೆಳಗಾವಿಯ ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ ಇಟ್ಟಂಗಿ ಭಟ್ಟಿ ಎಂಬಲ್ಲಿ ನಡೆದಿದೆ.

ಮೃತರನ್ನು ಗುರುನಾಥ್ ನಾರ್ವೇಕ(20) ಎಂಸು ಗುರುತಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಸು ಗ್ರಾಮದ ಈತ ಕೆಲಸಕ್ಕೆಂದು ಕೆಲವು ದಿನಗಳ ಹಿಂದೆ ನಿಡಿಗಲ್ ಗೆ ಬಂದಿದ್ದು, ಗುರುವಾರ ರಾತ್ರಿ ಮಳೆ ಸುರಿದಿದ್ದರಿಂದ ಇಟ್ಟಂಗಿ ಭಟ್ಟಿಗೆ ಪ್ಲಾಸ್ಟಿಕ್ ಹೊದಿಕೆ ಹಾಕುತ್ತಿದ್ದ ಸಂದರ್ಭ ಏಕಾಏಕಿ ಸಿಡಿಲು ಬಡಿದು ಈತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Also Read  ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ!   ➤ ಒಂದೇ ದಿನ 935 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ!

error: Content is protected !!
Scroll to Top