ಬೆಳ್ಳಾರೆ: ಎಸ್ ಕೆ ಎಸ್ಎಸ್ ಎಫ್ ಸ್ಥಾಪಕ ದಿನಾಚರಣೆ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 19. ಬೆಳ್ಳಾರೆ ಎಸ್ಕೆಎಸ್ಸೆಸ್ಸೆಫ್ ಶಾಖೆಯ ವತಿಯಿಂದ ಎಸ್ಕೆಎಸ್ಸೆಸ್ಸೆಫ್ ಸ್ಥಾಪಕ ದಿನಾಚರಣೆಯ ಪ್ರಯುಕ್ತ ಶುಕ್ರವಾರದಂದು ಬೆಳ್ಳಾರೆ ಮಸೀದಿ ಬಳಿ ದ್ವಜಾರೋಹಣ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ ಇದರ ಅಧ್ಯಕ್ಷರಾದ ಯು.ಹೆಚ್ ಅಬೂಬಕ್ಕರ್ ಅವರು ವಹಿಸಿದ್ದರು. ದುವಾ ಕಾರ್ಯಕ್ರಮವನ್ನು ಬಹು! ಹಸೈನಾರ್ ಮುಸ್ಲಿಯಾರ್ ಪೆರುವಾಜೆ ನಿರ್ವಹಿಸಿದರು. ದ್ವಜಾರೋಹಣವನ್ನು ಎಸ್ಕೆಎಸ್ಸೆಸ್ಸೆಫ್ ಬೆಳ್ಳಾರೆ ಕ್ಲಸ್ಟರ್ ಅಧ್ಯಕ್ಷರಾದ ಸಿದ್ದೀಕ್ ಮಾಲೆಂಗ್ರಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಬೆಳ್ಳಾರೆ ಯುನಿಟ್ ಅಧ್ಯಕ್ಷರಾದ ಮಹಮ್ಮದ್ ಅಂದ್ರುರವರು ಮಾಡಿದರು. ಕಾರ್ಯಕ್ರಮದಲ್ಲಿ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ ಇದರ ಉಪಾಧ್ಯಕ್ಷರಾದ ಅಬ್ದುಲ್ ಖದರ್ ಹಾಜಿ ಬಯಂಬಾಡಿ, ಎಸ್ಕೆಎಸ್ಸೆಸ್ಸೆಫ್ ಸುಳ್ಯ ವಲಯ ಅಧ್ಯಕ್ಷರಾದ ಜಮಾಲುದ್ದೀನ್ ಕೆ ಎಸ್ ಬೆಳ್ಳಾರೆ, ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ ಉಪಾಧ್ಯಕ್ಷರಾದ ನಾಸಿರ್ ಬಿಝ್, ಕಾರ್ಯದರ್ಶಿ ಬಷೀರ್ ಕಲ್ಲಪಣೆ,ಯೂತ್ ವಿಂಗ್ ಅಧ್ಯಕ್ಷರಾದ ಶಾಪಿ ಸ್ಕೈ, ಪೆರುವಾಜೆ ಮದರಸ ಉಪಾಧ್ಯಕ್ಷರಾದ ಉಮ್ಮರ್ ಪೆರುವಾಜೆ, ಮದರಸ ಮೇನೇಜ್ ಮೆಂಟ್ ಕಾರ್ಯದರ್ಶಿ ಬಷೀರ್ ಯು ಪಿ ಸ್ವಾಗತಿಸಿ, ಎಸ್ಕೆಎಸ್ಸೆಸ್ಸೆಫ್ ಬೆಳ್ಳಾರೆ ಯುನಿಟ್ ಕಾರ್ಯದರ್ಶಿ ತಾಜುದ್ದೀನ್ ಪಾಲ್ತಾಡ್ ಧನ್ಯವಾದಗೈದರು.

Also Read  ➤➤ ಕವರ್ ಸ್ಟೋರಿ ದೂರವಾಯಿತು ಕೊಣಾಜೆ ದೂರವಾಣಿ ಸಂಪರ್ಕ..!! ➤ ಕೇಳುವವರು ಯಾರು ಸಾರ್ವಜನಿಕರ ಗೋಳು..? ✍? ಕಿರಣ್ ಕಡಬ

error: Content is protected !!
Scroll to Top