ಮಂಗಳೂರು: ಮುಂದುವರಿದ ಎಸಿಬಿ ರೈಡ್ ➤ ಯು.ಟಿ ಇಫ್ತಿಕಾರ್ ಹಾಗೂ ಪತ್ನಿಯ ಅಕೌಂಟ್ ಸೀಜ್..‼️ ವಿಚಾರಣೆಗೆ ಹಾಜರಾಗುವಂತೆ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 19. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ಮೂರನೇ ದಿನವೂ ಮುಂದುವರಿದಿದ್ದು, ಮಾಜಿ ಸಚಿವ ಯು.ಟಿ.ಖಾದರ್ ಸಹೋದರ ಡಾ.ಇಫ್ತಿಕಾರ್ ಗೆ ಶಾಕ್ ಕೊಟ್ಟಿದ್ದ ಐಟಿ ಅಧಿಕಾರಿಗಳು ಇದೀಗ ಅವರ ಬ್ಯಾಂಕ್ ಖಾತೆಯನ್ನು ಸೀಜ್ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಕಣಚೂರು ವೈದ್ಯಕೀಯ ಕಾಲೇಜಿನ ಮೇಲೆ ರೈಡ್ ಮಾಡಿದ್ದ ಅಧಿಕಾರಿಗಳು, ಅದರ ಜೊತೆ ಶೇರ್ ಹೊಂದಿದ ಹಿನ್ನೆಲೆ ಡಾ.ಇಫ್ತಿಕಾರ್ ಅವರಿಗೆ ಸೇರಿದ‌ ಮಂಗಳೂರು ನಗರದ ಲೈಟ್ ಹೌಸ್ ಹಿಲ್ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ಗೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ‌ ಸಂಬಂಧಿಸಿ 5 ಖಾಸಗಿ ಹಾಗೂ 2 ರಾಷ್ಟ್ರೀಕೃತ ಬ್ಯಾಂಕ್​ ಗಳಲ್ಲಿರುವ ಡಾ ಇಫ್ತಿಕಾರ್​ ಹಾಗೂ ಅವರ ಪತ್ನಿಯ ಬ್ಯಾಂಕ್​ ಅಕೌಂಟ್​ಗಳನ್ನು ಅಧಿಕಾರಿಗಳು ಸೀಜ್​ ಮಾಡಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಡಾ.ಇಫ್ತಿಕಾರ್ ಅವರು ಅಬುದಾಬಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚನೆಯನ್ನು ನೀಡಿದ್ದಾರೆ. ಕೊರೊನಾ ಕಾಲದಲ್ಲಿ ಅಕ್ರಮ ನಡೆಸಿರುವ ಕುರಿತು ಆರೋಪ ಕೇಳಿಬಂದಿದ್ದು, ಅಲ್ಲದೇ ಆದಾಯ ತೆರಿಗೆ ವಂಚನೆ ಮಾಡಿರುವ ಕುರಿತು ಈ ದಾಳಿ ನಡೆಯುತ್ತಿದೆ ಎಂದು ಹೇಳಲಾಗಿದೆ.

Also Read  ಮಂಗಳೂರಿನ ಯುವತಿ ಥಾಯ್ಲೆಂಡ್ ನಲ್ಲಿ ಮೃತ್ಯು

error: Content is protected !!
Scroll to Top