ಮಂಗಳೂರು: ದರೋಡೆಗೆ ಯತ್ನಿಸಿದ 7 ಮಂದಿಯ ಬಂಧನ ► ಆಕಾಶಭವನ ಶರಣ್ ಸಹಚರರು ಸಿಸಿಬಿ ಬಲೆಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.20. ನಗರದ ಬಿಜೈಯಲ್ಲಿರುವ ಬಿಗ್‌ಬಝಾರ್ ಶಾಪಿಂಗ್ ಕಾಂಪ್ಲೆಕ್ಸ್ ಎದುರು ದರೋಡೆಗೆ ಯತ್ನಿಸಿದ ಆರೋಪದಲ್ಲಿ ಆಕಾಶಭವನ ಶರಣ್ ಸಹಚರರೆನ್ನಲಾದ 7 ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಾಪಿಗುಡ್ಡೆ ಆಕಾಶಭವನದ ಪ್ರೀತಂ ಪೂಜಾರಿ(23), ದೇವಿನಗರ ಕುಂಜತ್‌ಬೈಲ್‌ನ ಶಾಲ್ ಕುಮಾರ್ (23), ದೇರೇಬೈಲ್ ಕೊಂಚಾಡಿಯ ಗೌತಮ್ ದೇವಾಡಿಗ (23), ಮೂಡುಶೆಡ್ಡೆಯ ವಿನೋದ್ ರಾಜ್ (21), ಮೂಡುಶೆಡ್ಡೆ ಎದುರು ಪದವಿನ ದಿವಾಕರ (29), ತೊಕ್ಕೊಟ್ಟು ಕೃಷ್ಣನಗರದ ಪ್ರವೀಣ್ (25), ಯೆಯ್ಯೊಡಿ ಗುಂಡಳಿಕೆ ಮನೆ ನಿವಾಸಿ ಕಾರ್ತಿಕ್ (25) ಎಂದು ಗುರುತಿಸಲಾಗಿದ್ದು, ಇವರು ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿ ಆಕಾಶಭವನ ಶರಣ್ ರೋಹಿದಾಸ್ ಎಂಬಾತನ ಸೂಚನೆಯಂತೆ ದರೋಡೆಗೆ ಸಂಚು ರೂಪಿಸಿದ್ದರೆಂದು ತಿಳಿದುಬಂದಿದೆ.

ಇವರು ಮಂಗಳೂರು ನಗರದ ಬಿಜೈ ಕಾಫಿಕಾಡ್ ರಸ್ತೆಯಲ್ಲಿನ ಬಿಜೈ ಬಿಗ್‌ಬಝಾರ್ ಎದುರು 6-7 ಮಂದಿ ಯುವಕರು ದರೋಡೆಗೆ ಯತ್ನಿಸುತ್ತಿದ್ದಾರೆ ಎಂಬ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರಿಗೆ ದೊರೆತ ಮಾಹಿತಿಯಂತೆ ದಾಳಿ ನಡೆಸಿ ಬಂಧಿಸಿದ್ದಾರೆ ಎನ್ನಲಾಗಿದೆ. ಆರೋಪಿಗಳ ಪೈಕಿ ಪ್ರೀತಂ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ಪೂರ್ವ, ಬರ್ಕೆ, ಕಾವೂರು ಪೊಲೀಸ್ ಠಾಣೆಗಳಲ್ಲಿ ದರೋಡೆಗೆ ಯತ್ನ, ಹಫ್ತಾ ಹಣಕ್ಕೆ ಬೆದರಿಕೆಗೆ ಸಂಬಂಧಪಟ್ಟಂತೆ 3 ಪ್ರಕರಣಗಳು ದಾಖಲಾಗಿದ್ದು, ಎಂದು ಪೊಲೀಸರು ತಿಳಿಸಿದ್ದಾರೆ. ವಿಶಾಲ್ ಕುಮಾರ್ ಎಂಬಾತನ ವಿರುದ್ಧ ಕಾವೂರು, ಬರ್ಕೆ ಪೊಲೀಸ್ ಠಾಣೆಗಳಲ್ಲಿ ಒಟ್ಟು 2 ಪ್ರಕರಣಗಳು ದಾಖಲಾಗಿವೆ.

Also Read  ಉಚಿತ ಆಯುಷ್ ಚಿಕಿತ್ಸಾ ಶಿಬಿರ ಕಾರ್ಯಕ್ರಮ

ಪೊಲೀಸ್ ಕಮೀಷನರ್ ಟಿ. ಆರ್. ಸುರೇಶ್ ಅವರ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ.

error: Content is protected !!
Scroll to Top