ಪುತ್ತೂರು: ಮನೆಗೆ ಜಪ್ತಿಗೆ ಬಂದ ಬ್ಯಾಂಕ್ ಸಿಬ್ಬಂದಿ ➤ ಮನೆಯೊಡತಿ ನೇಣಿಗೆ ಶರಣು



(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 18. ಬ್ಯಾಂಕ್ ಸಾಲ ತೀರಿಸಲಿಲ್ಲ ಎಂದು ಮನೆ ಮುಟ್ಟುಗೋಲು ಹಾಕಲು ಬಂದ ರಾಷ್ಟ್ರೀಕೃತ ಬ್ಯಾಂಕ್‌ನ ಸೀಸರ್‌ ಗಳ ಸಮ್ಮುಖದಲ್ಲಿ ಮರ್ಯಾದೆಗೆ ಅಂಜಿ ಮನೆ ಮಾಲಕನ ಪತ್ನಿಯು ಡೆತ್ ನೋಟ್ ಬರೆದಿಟ್ಟು, ಮನೆ ಕೊಠಡಿಯಲ್ಲಿನ ಸೀಲಿಂಗ್ ಫ್ಯಾನ್‌ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಪುತ್ತೂರಿನ ಹಾರಾಡಿ ರೈಲ್ವೇ ರಸ್ತೆಯ ಬಳಿ ನಡೆದಿದೆ.





ಆತ್ಮಹತ್ಯೆಗೈದವರನ್ನು ಪುತ್ತೂರಿನ ಉದ್ಯಮಿ ಹಾರಾಡಿ ರೈಲ್ವೇ ನಿಲ್ದಾಣ ರಸ್ತೆ ನಿವಾಸಿ ರಘುವೀರ್ ಪ್ರಭು ಅವರ ಪತ್ನಿ ಪ್ರಾರ್ಥನಾ ಪ್ರಭು (52ವ) ಎಂದು ಗುರುತಿಸಲಾಗಿದೆ. ಇವರು ಆತ್ಮಹತ್ಯೆಗೂ ಮುನ್ನ ‘ನನ್ನ ಸಾವಿಗೆ ಕೆನರಾ ಬ್ಯಾಂಕ್‌ ನವರ ಕಿರಿಕಿರಿ ಹಾಗೂ ಮೆಂಟಲ್ ಟೋರ್ಚರ್ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆʼ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ. ಇವರಿಗೆ ಕೆನರಾ ಬ್ಯಾಂಕ್‌ ನಲ್ಲಿ ಸಾಲವಿದ್ದು, ಸಾಲ ಮರುಪಾವತಿ ಮಾಡಿಲ್ಲ ಎಂದು ಬ್ಯಾಂಕ್ ನೋಟೀಸ್ ಬಂದಿತ್ತು. ಬಳಿಕ ಕೋರ್ಟ್ ನೋಟೀಸ್ ಮೂಲಕ ಮನೆ ಮುಟ್ಟುಗೋಲು ಹಾಕಲು ಗುರುವಾರದಂದು ಬ್ಯಾಂಕ್ ಸೀಸರ್ ಜೊತೆ ಬಂದಿದ್ದು ಮನೆ ಮಂದಿ ಆತಂಕ್ಕಕೊಳಾಗಿದ್ದರು.ಇದರ ನಡುವೆಯೇ ಪ್ರಾರ್ಥನಾ ಪ್ರಭು ಅವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.






error: Content is protected !!
Scroll to Top