ಮಂಗಳೂರು: ಎರಡನೇ ದಿನವೂ ಮುಂದುವರಿದ ಐಟಿ‌ ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 18. ಇದೀಗ ಎರಡನೇ ದಿನವೂ ಮಂಗಳೂರಿನಲ್ಲಿ ಎಸಿಬಿ ಅಧಿಕಾರಿಗಳ ದಾಳಿ ಮುಂದುವರಿದಿದ್ದು, ನಿನ್ನೆ ರಾತ್ರಿಯೂ ನಿರಂತರವಾಗಿ ನಿದ್ದೆಯಿಲ್ಲದೇ ಅಧಿಕಾರಿಗಳಯ ಪರಿಶೀಲನೆಯಲ್ಲಿ ತೊಡಗಿದ್ದಾರೆ. ‌

ಈ ದಾಳಿಯು ಮಂಗಳೂರಿನ ನಾಲ್ಕು ಪ್ರತಿಷ್ಠಿತ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳ ಮಾಲಕರನ್ನು ಗುರಿಯಾಗಿಸಿಕೊಂಡು ನಡೆದಿದ್ದು, ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಮಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳನ್ನು ಹೊಂದಿರುವ ಯೇನೆಪೋಯ, ಕಣಚೂರು, ಶ್ರೀನಿವಾಸ್ ಹಾಗೂ ಎಜೆ ಆಸ್ಪತ್ರೆಗಳ ಮಾಲೀಕರ ಮನೆ ಮತ್ತು ಕಚೇರಿಗಳಲ್ಲಿ ಪರಿಶೀಲನೆ ಮುಂದುವರಿದಿದೆ.

Also Read  ರೇಷನ್ ಕಾರ್ಡ್ - ಇ ಕೆವೈಸಿ ಪ್ರಕ್ರಿಯೆ ವಿಸ್ತರಣೆ

ಐಟಿ ಅಧಿಕಾರಿಗಳು ನಾಲ್ಕು ದಿನಕ್ಕೆಂದು ಸ್ಥಳೀಯ ಕಾರುಗಳನ್ನು ಬಾಡಿಗೆಗೆ ಪಡೆದು, ಮಹತ್ವದ ಮಾಹಿತಿಗಳನ್ನು ಖಚಿತಪಡಿಸಿಕೊಂಡೇ ಈ ದಾಳಿ ನಡೆಸಿರುವ ಸಾಧ್ಯತೆಯೂ ಇದೆ. 200ಕ್ಕೂ ಅಧಿಕ ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದು ಮಂಗಳೂರಿನ ವಿವಿಧೆಡೆ ರಹಸ್ಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

error: Content is protected !!
Scroll to Top