ಮಾಜಿ ಕೇಂದ್ರ ಸಚಿವ ಸತೀಶ್ ಶರ್ಮಾ ವಿಧಿವಶ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 18. ಕಾಂಗ್ರೆಸ್‌ ಮುಖಂಡ ಮತ್ತು ಕೇಂದ್ರದ ಮಾಜಿ ಸಚಿವ ಕ್ಯಾಪ್ಟನ್‌ ಸತೀಶ್‌ ಶರ್ಮಾ(73) ಅವರು ಬುಧವಾರದಂದು ರಾತ್ರಿ ಗೋವಾದಲ್ಲಿ ನಿಧನರಾಗಿದ್ದಾರೆ.

ಕ್ಯಾನ್ಸರ್‌ ಪೀಡಿತರಾಗಿದ್ದ ಇವರು ಕೆಲವು ಕಾಲದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಇವರ ಅಂತ್ಯ ಕ್ರಿಯೆಯು ಶುಕ್ರವಾರದಂದು ದೆಹಲಿಯಲ್ಲಿ ನಡೆಯಲಿದೆ ಎಂದು ಸತೀಶ್‌ ಅವರ ಮಗ ಸಮೀರ್‌ ತಿಳಿಸಿದ್ದಾರೆ. ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರಿಗೆ ಆಪ್ತರಾಗಿದ್ದ ಸತೀಶ್‌ ಶರ್ಮಾ, 1993ರಿಂದ 1996ರವರೆಗೂ ಪಿ.ವಿ.ನರಸಿಂಹ ರಾವ್‌ ಆಡಳಿತದ ಸರ್ಕಾರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಕೇಂದ್ರ ಸಚಿವರಾಗಿದ್ದರು.

Also Read  ಚಿಕಿತ್ಸೆಗೆ ಸ್ಪಂದಿಸದೆ ರೋಗಿ ಮೃತಪಟ್ಟರೆ ವೈದ್ಯರು ಹೊಣೆಗಾರರಲ್ಲ ➤ ಸುಪ್ರೀಂ ಕೋರ್ಟ್

error: Content is protected !!
Scroll to Top