ಅಂತ್ಯಸಂಸ್ಕಾರ ನಡೆದು 10 ದಿನಗಳ ನಂತರ ಜೀವಂತವಾಗಿ ಮನೆಗೆ ಬಂದ ವ್ಯಕ್ತಿ ➤ ಬೆಳ್ತಂಗಡಿಯಲ್ಲಿ ನಡೆಯಿತು ಕುತೂಹಲಕಾರಿ ಘಟನೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ.17. ಅಂತ್ಯ ಸಂಸ್ಕಾರ ನಡೆಸಿ 10 ದಿನಗಳ ನಂತರ ವ್ಯಕ್ತಿಯೋರ್ವರು ಜೀವಂತವಾಗಿ ಮನೆಗೆ ಬಂದ ಕುತೂಹಲಕಾರಿ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿಯ ಓಡಿಲ್ನಾಳ ಗ್ರಾಮದ ಕುಲ್ಲುಂಜ ಸಮೀಪದ ಕೆರೆಯೊಂದರಲ್ಲಿ ಗುರುತು ಪರಿಚಯ ಸಿಗದಷ್ಟು ಕೊಳೆತು ಹೋಗಿದ್ದ ಮೃತದೇಹವೊಂದು ದೊರೆತಿದ್ದು, ಇದು ಕಳೆದ ಹಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಗರ್ಡಾಡಿ ನಿವಾಸಿ ಶ್ರೀನಿವಾಸ ದೇವಾಡಿಗ (60) ಅವರನ್ನು ಹೋಲುತ್ತಿತ್ತು. ಅದರಂತೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹದ ಅಂತ್ಯಸಂಸ್ಕಾರ ವಿಧಿಗಳನ್ನು ಮನೆಯವರು ನೆರವೇರಿಸಿದ್ದರು. 10 ದಿನಗಳ ಬಳಿಕ ಆ ವ್ಯಕ್ತಿ ಜೀವಂತವಾಗಿ ಊರಿಗೆ ಮರಳಿದ್ದು ಎಲ್ಲರಲ್ಲೂ ಆಶ್ಚರ್ಯಚಕಿತರನ್ನಾಗಿಸಿದೆ.

ಕುಡಿತದ ಚಟ ಅಂಟಿಸಿಕೊಂಡಿದ್ದ ಶ್ರೀನಿವಾಸ ಅವರು ಸಹೋದರನ ಮನೆಯಲ್ಲಿ ನೆಲೆಸಿದ್ದರು. ಹಲವು ಬಾರಿ ಮನೆಯಿಂದ ಹೊರಹೋಗುತ್ತಿದ್ದ ಅವರು ವಾರಗಳ ಕಾಲ ಮನೆಗೆ ವಾಪಾಸಾಗದೆ ಎಲ್ಲೆಂದರಲ್ಲಿ ತಿರುಗಾಡುತ್ತಾ, ಸಿಕ್ಕ ಸಿಕ್ಕಲ್ಲಿ‌ ಮಲಗಿ ನಿದ್ರಿಸುತ್ತಿದ್ದರು. ಅವರಿಗೆ ಮನಸಾದಾಗ ಮನೆಗೆ ಮರಳುತ್ತಿದ್ದ ಅವರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಪ್ರಾಣ ಬಿಟ್ಟಿರಬಹುದೆಂದು ಅಂದುಕೊಂಡಿದ್ದ ಮನೆಯವರು ಅಂತ್ಯ ಸಂಸ್ಕಾರ ನಡೆಸಿದ್ದರು. ಇದೀಗ ಶ್ರೀನಿವಾಸ ದೇವಾಡಿಗರು ಮನೆಗೆ ಹಿಂತಿರುಗಿದ್ದರಿಂದ ಆದರೆ ಇತ್ತ ಕೆರೆಯಲ್ಲಿ ಪತ್ತೆಯಾದ ಮೃತದೇಹ ಯಾರದ್ದು ಎಂಬ ಬಗ್ಗೆ ಪೊಲೀಸರಿಗೆ ತಲೆನೋವು ಉಂಟಾಗಿದೆ.

Also Read  ಚಂದನ ಸಾಹಿತ್ಯ ವೇದಿಕೆ ವತಿಯಿಂದ ಆನ್ ಲೈನಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ

error: Content is protected !!
Scroll to Top