ಶಾಲೆಗೆಂದು ತೆರಳಿ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕಡಬದ ಬಾಲಕಿ ಪತ್ತೆ ➤ ತಮಿಳುನಾಡಿನಿಂದ ಕರೆತಂದ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಫೆ.17. ತಿಂಗಳ ಹಿಂದೆ ಕಡಬದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ತಮಿಳುನಾಡಿನಲ್ಲಿ ಪತ್ತೆಹಚ್ಚಿರುವ ಪೊಲೀಸರು ಊರಿಗೆ ಕರೆತಂದಿದ್ದಾರೆ.

ಡಿಸೆಂಬರ್ 23 ರಂದು ಮರ್ಧಾಳ ಶಾಲೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿ ನಾಪತ್ತೆಯಾಗಿದ್ದ ಐತ್ತೂರು ಗ್ರಾಮದ ಸಿಆರ್ ಸಿ ಕಾಲನಿಯ ನಿವಾಸಿ ಅಪ್ರಾಪ್ತ ವಯಸ್ಸಿನ ಬಾಲಕಿ ತಮಿಳುನಾಡಿನಲ್ಲಿರುವ ಬಗ್ಗೆ ಲೊಕೇಷನ್ ಆಧಾರದಲ್ಲಿ ಪತ್ತೆ ಹಚ್ಚಿರುವ ಸುಳ್ಯ ಆರಕ್ಷಕ ಠಾಣೆಯ ಅಪರಾಧ ವಿಭಾಗದ ಎಸ್‌ಐ ರತನ್‌ಕುಮಾರ್‌ ಹಾಗೂ ಕಡಬ ಠಾಣೆ ಸಿಬ್ಬಂದಿ ಮಂಜುನಾಥ್‌ ಅವರು ತಮಿಳುನಾಡಿಗೆ ತೆರಳಿ ದ.ಕ. ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್‌ಪೆಕ್ಟರ್‌ಗಳಾದ ರವಿ ಬಿ.ಎಸ್‌., ಚೆಲುವರಾಜ್‌, ಗಣಕ ಯಂತ್ರ ವಿಭಾಗದ ಸಿಬ್ಬಂದಿಗಳಾದ ದಿವಾಕರ್‌ ಹಾಗೂ ಸಂಪತ್‌ ಅವರ ಸಹಕಾರದೊಂದಿಗೆ ಬಾಲಕಿಯನ್ನು ಪತ್ತೆ ಮಾಡಿ ಕಡಬ ಠಾಣೆಗೆ ಕರೆ ತಂದಿದ್ದಾರೆ. ಬಳಿಕ ಆಕೆಯನ್ನು ಆಕೆಯ ಹೆತ್ತವರ ಜತೆಗೆ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ಕಡಬ ಠಾಣಾ ಎಸ್‌ಐ ರುಕ್ಮ ನಾಯ್ಕ್‌ ತಿಳಿಸಿದ್ದಾರೆ.

Also Read  ವೀರೇಂದ್ರ ಹೆಗ್ಗಡೆ ಅವರಿಂದ 'ಮಂದಾರ' ಪ್ರಾಯೋಗಿಕ ಪತ್ರಿಕೆ ಅನಾವರಣ !

error: Content is protected !!
Scroll to Top