ಟ್ರಕ್ ಅಪಘಾತ ➤ 15 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಜಲ್ಗಾಂವ್, ಫೆ. 15. ಭೀಕರ ಟ್ರಕ್‌ ಅಪಘಾತದಲ್ಲಿ ಬರೋಬ್ಬರಿ 15 ಮಂದಿ ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯ ಯವಾಲ್ ತಾಲೂಕಿನ ಕಿಂಗ್‌ವಾನ್ ಗ್ರಾಮದ ಬಳಿ ನಡೆದಿದೆ.


ಮೃತರಲ್ಲಿ 7 ಪುರುಷರು, 6 ಮಹಿಳೆಯರು ಮತ್ತು 2 ಮಕ್ಕಳು ಸೇರಿದ್ದಾರೆ. ಈ ಮಧ್ಯೆ ಟ್ರಕ್ ಚಾಲಕನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಮೃತಪಟ್ಟವರೆಲ್ಲರೂ ಜಿಲ್ಲೆಯ ಅಭೋದಾ, ಕೆರ್ಹಾಲಾ ಮತ್ತು ರಾವರ್‌ನ ಗ್ರಾಮದ ಕಾರ್ಮಿಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಅಪರಿಚಿತ ಕಾರು ಢಿಕ್ಕಿ.!   ಯುವಕನೋರ್ವ ಮೃತ್ಯು

error: Content is protected !!
Scroll to Top