ಕಡಬ: ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಜಿಲ್ಲಾಧ್ಯಕ್ಷರಾಗಿ ಶಶಿಧರ ಬೊಟ್ಟಡ್ಕ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 15. ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ಹಿರಿಯ ದಲಿತ ಮುಖಂಡ, ಸಾಮಾಜಿಕ ಕಾರ್ಯಕರ್ತ ಕೊಂಬಾರು ಗ್ರಾಮದ ಶಶಿಧರ ಬೊಟ್ಟಡ್ಕ ಅವರನ್ನು ನೇಮಿಸಲಾಗಿದೆ.

ಪ್ರಧಾನ ಕಾರ್ಯದರ್ಶಿಯಾಗಿ ಅಚ್ಯುತ ಮಲ್ಕಾಜೆ, ಉಪಾಧ್ಯಕ್ಷರಾಗಿ ಆನಂದ ಹೊಸ್ಮಠ, ದಿನೇಶ್ ಗಾಣಂತಿ, ಕಾನೂನು ಸಲಹೆಗಾರರಾಗಿ ನಾರಾಯಣ ಕಡಲಕೆರೆ, ಗಿರಿಜಾ ಪಿ., ಗೌರವ ಸಲಹೆಗಾರರಾಗಿ ಲಕ್ಷ್ಮೀಶ ಗಬ್ಲಡ್ಕ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೆ.ಪಿ.ಆನಂದ, ರಾಜು ಗೋಳಿಯಡ್ಕ, ಸರೋಜಿನಿ ಶಶಿಧರ, ಸಂತೊಷ್, ದೇವಪ್ಪ, ಸುರೇಶ್ ತೋಟಂತಿಲ, ರಾಮಕೃಷ್ಣ ಹೊಳ್ಳಾರು, ಬಾಬು ಕನಕಮಜಲು ಮೊದಲಾದವರು ಆಯ್ಕೆಯಾಗಿದ್ದಾರೆ.

Also Read  ಉಜಿರೆ: ಮುಖಕ್ಕೆ ಟೇಪ್ ಸುತ್ತಿದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ

error: Content is protected !!
Scroll to Top