ಕಲ್ಲುಗುಂಡಿ: ಸಚಿವ ಅಂಗಾರರಿಗೆ ಅಭಿನಂದನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 15. ಕರ್ನಾಟಕದ ಅತ್ಯಂತ ಸರಳ ಸಜ್ಜನಿಕೆಯ ಪ್ರಮಾಣಿಕ ಶಾಸಕರೆಂದು ಜನ ಮನ್ನಡೆ ಗಳಿಸಿ ಸತತ ಆರನೇ ಬಾರಿಗೆ ಶಾಸಕರಾಗಿ ಇದೀಗ ಕರ್ನಾಟಕ ಘನ ಸರಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್ ಅಂಗಾರ ರವರಿಗೆ ಸಂಪಾಜೆ ದಕ್ಷಿಣ ಕನ್ನಡ ಮತ್ತು ಕೊಡಗು ಹಾಗೂ ಚೆಂಬು ಗ್ರಾಮದ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಿಂದ ಅಭಿನಂದನಾ ಕಾರ್ಯಕ್ರಮವು ಭಾನುವಾರದಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.


ಇದರ ಅಧ್ಯಕ್ಷತೆಯನ್ನು ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ವಹಿಸಿದರು. ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಪಿ.ಜಗದೀಶ್ ಅಭಿನಂದನಾ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪ ಮೇದಪ್ಪ, ಮಡಿಕೇರಿ ತಾಲ್ಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯೆ ರಜನಿ ಶರತ್, ಸಂಪಾಜೆ-ಕೊಡಗು ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಕುಮಾರ ಚೆದ್ಕಾರ್, ಚೆಂಬು ಶಕ್ತಿ ಕೇಂದ್ರ ಅಧ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಾಯ, ಸುಳ್ಯ ಎಸ್.ಸಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯ ಆಲಡ್ಕ, ದ.ಕ.ಜಿಲ್ಲಾ ಶಕ್ತಿ ಕೇಂದ್ರ ಪ್ರಮುಖ್ ಕೆ.ಪಿ.ಜಗದೀಶ್, ಮುಖಂಡರಾದ ಎಸ್.ಪಿ.ಲೋಕನಾಥ್, ಶಿವಾನಂದ ಕುಕ್ಕುಂಬಳ, ರಮಾದೇವಿ ಕಳಗಿ, ವರದರಾಜ್, ಷನ್ಮುಖಂ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಚಿವರಿಗೆ ಗ್ರಾಮದವರಿಂದ ಸಾರ್ವಜನಿಕ ವಾಗಿ ಅಭಿನಂದಿಸಲಾಯಿತು. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಭಾಜಪ ಬೆಂಬಲಿತ ಮೂರು ಗ್ರಾಮದ ಅಭ್ಯರ್ಥಿಗಳಿಗೆ ಸಚಿವರಿಂದ ಗೌರವಾರ್ಪಣೆ ಮಾಡಲಾಯಿತು. ಕೇಶವ ಬಂಗ್ಲೆಗುಡ್ಡೆ ಸ್ವಾಗತಿಸಿ ಶರತ್ ಹಾಗೂ ಚೇತನ್ ಕಾರ್ಯಕ್ರಮ ನಿರೂಪಿಸಿದರು.

Also Read  ಉಪ್ಪಿನಂಗಡಿ: ತಾಯಿ - ಮಗು ನಾಪತ್ತೆ

error: Content is protected !!
Scroll to Top