? ನೀರಿನಲ್ಲಿ ಮುಳುಗಿ ಮೂವರು ಪುಟ್ಟ ಸಹೋದರರ ದುರ್ಮರಣ ➤ ಮನಕಲುಕುವ ಘಟನೆಗೆ ಸಾಕ್ಷಿಯಾಯಿತು ದೇವರನಾಡು..!

(ನ್ಯೂಸ್ ಕಡಬ) newskadaba.com ಪಾಲಕ್ಕಾಡ್, ಫೆ. 14. ಮಾವಿನ ಹಣ್ಣು ತೊಳೆಯಲೆಂದು ಕೆರೆಗೆ ಇಳಿದಿದ್ದ ಮೂವರು ಸಹೋದರರು ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕೇರಳದ ಪಾಲಕ್ಕಾಡ್ ಸಮೀಪದ ಆಲತ್ತೂರು ಎಂಬಲ್ಲಿ ಭಾನುವಾರದಂದು ನಡೆದಿದೆ.

ಮೃತಪಟ್ಟವರನ್ನು ಪಾಲಕ್ಕಾಡ್ ಆಲತ್ತೂರು ನಿವಾಸಿ ಜಸೀರ್ ಎಂಬವರ ಪುತ್ರರಾದ ಜಿನ್’ಷಾದ್ (12), ರಿನ್’ಷಾದ್ (7) ಹಾಗೂ ರಿಫಾಸ್ (3) ಎಂದು ಗುರುತಿಸಲಾಗಿದೆ. ಇವರು ಭಾನುವಾರದಂದು ಮನೆ ಸಮೀಪದ ಸಾರ್ವಜನಿಕ ಕೆರೆಯ ಬಳಿ ಮಾವಿನಕಾಯಿ ತೊಳೆಯಲೆಂದು ತೆರಳಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಇತ್ತ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Also Read  ತಲೆ ನೋವಿನ ಪರಿಹಾರಕ್ಕಾಗಿ ತಲೆಗೆ ಹೊಡೆದ ಪೂಜಾರಿ ➤ ಮಹಿಳೆ ಮೃತ್ಯು..!

error: Content is protected !!
Scroll to Top