(ನ್ಯೂಸ್ ಕಡಬ) newskadaba.com ಬೆಳಂದೂರು, ಫೆ. 14. ಕಡಬ ತಾಲೂಕು ಬೆಳಂದೂರು ಗ್ರಾಮದ ಬನಾರಿ ಜನಾರ್ದನ ಶೆಟ್ಟಿಗಾರ್ ರವರ ಪತ್ನಿಯು ಕೆಲ ದಿನಗಳ ಹಿಂದೆ ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದು, ಇವರ ಚಿಕಿತ್ಸೆಗೆ ಪಳ್ಳತ್ತಾರು ಹಾಗೂ ಬೆಳಂದೂರಿನ ಮುಸ್ಲಿಂ ಯುವಕರ ತಂಡದ ವತಿಯಿಂದ 10,000 ರುಪಾಯಿ ಧನಸಹಾಯ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ನವಾಝ್ ಸಖಾಫಿ ಬೆಳಂದೂರು, ಅಬೂಬಕರ್ ಫಾಳಿಲಿ, ಪಳ್ಳತ್ತಾರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಉಮ್ಮರ್ ಶಾಫಿ, ಯೂಸುಫ್ ಬನಾರಿ ಮೊದಲಾದವರು ಉಪಸ್ಥಿತರಿದ್ದರು.