ಸುಳ್ಯ: ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಸಭೆ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 14. ಸುಳ್ಯ ಬಿಜೆಪಿ ಮಂಡಲದ ಸಾಮಾಜಿಕ ಜಾಲತಾಣ ಪ್ರಕೋಷ್ಟಕದ ಸಭೆಯು ಸುಳ್ಯದ ಬಿಜೆಪಿ ಕಛೇರಿಯಲ್ಲಿ ಭಾನುವಾರದಂದು ನಡೆಯಿತು.

ಫೆ.28ರಂದು ಮಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟಕದ ಜಿಲ್ಲಾ ಕಾರ್ಯಕಾರಿಣಿ ಸಭೆಯ ಪೂರ್ವಭಾವಿ ಸಭೆಯು ಈ ಸಂದರ್ಭದಲ್ಲಿ ನಡೆಯಿತು. ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಅಜಿತ್ ಉಳ್ಳಾಲ್, ಸಹ ಸಂಚಾಲಕ ದೀರಜ್ ಮಂಗಳೂರು, ಅಕ್ಷಯ್, ಸಾಮಾಜಿಕ ಜಾಲತಾಣ ಜಿಲ್ಲಾ ಸಮಿತಿ ಸದಸ್ಯರಾದ ರವಿವರ್ಮ ಅಲೆಕ್ಕಾಡಿ, ಸುಳ್ಯ ಮಂಡಲ ಸಾಮಾಜಿಕ ಜಾಲತಾಣ ಮಂಡಲ ಸಮಿತಿ ಸಂಚಾಲಕ ಫಯಾಝ್ ಕಡಬ, ಸಹಸಂಚಾಲಕ ಸುಪ್ರೀತ್ ಮೋಂಟಡ್ಕ, ಕಾರ್ಯಕಾರಿ ಸದಸ್ಯರುಗಳಾದ ಪ್ರಸಾದ್ ಕಾಟೂರು, ಹರೀಶ್ ಬೂಡುಪನ್ನೆ, ಲೋಕೇಶ್ ಬರೆಪ್ಪಾಡಿ, ಪ್ರವೀಣ್ ಚೆನ್ನಾವರ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪುಲ್ವಾಮ ದಾಳಿ ಹುತಾತ್ಮರಾದ ಸೈನಿಕರಿಗೆ ನುಡಿನಮನ ಸಲ್ಲಿಸಲಾಯಿತು.

Also Read  ಬಂಟ್ವಾಳ: ಕಾರು - ಆಟೋ ರಿಕ್ಷಾ ನಡುವೆ ಢಿಕ್ಕಿ ➤ ಸಹೋದರಿಯರಿಬ್ಬರು ಮೃತ್ಯು, ಇಬ್ಬರು ಗಂಭೀರ

 

error: Content is protected !!
Scroll to Top