(ನ್ಯೂಸ್ ಕಡಬ) newskadaba.com ಕಡಬ, ಅ.19. ನೂಜಿಬಾಳ್ತಿಲ ಗ್ರಾಮದ ನೂಜಿಬೈಲ್ ತೆಗೆರ್ ತುಳುಕೂಟೊ ವತಿಯಿಂದ ದೀಪಾವಳಿ ಪ್ರಯುಕ್ತ ಮಾರಪ್ಪೆ ದಿ| ಜಿನ್ನಪ್ಪ ಗೌಡರ ಸ್ಮರಣಾರ್ಥ ಅ.22 ರಂದು ಶ್ರೀ ನೂಜಿ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿನ ಕೇಪುಂಜ ಗದ್ದೆಯಲ್ಲಿ ಬೆನ್ನಿದ ಕಂಡೊಡ್ ನಮ್ಮ ಜವನೆರ್ ಕ್ರೀಡಾಕೂಟ ನಡೆಯಲಿದೆ.
ಕ್ರೀಡಾಕೂಟವನ್ನು ಪ್ರಗತಿಪರ ಕೃಷಿಕರಾದ ಮೃತ್ಯುಂಜಯ ಭಿಡೆ ಕೆರೆತೋಟ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನೂಜಿಶ್ರೀ ಉಳ್ಳಾಲ್ತಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ಗೌಡ ಎಲುವಾಳೆ ವಹಿಸಲಿದ್ದು . ಪುತ್ತೂರು ಕೋಟಿಚೆನ್ನಯ ಕಂಬಳ ಸಮಿತಿ ಅಧ್ಯಕ್ಷರಾದ ಚಂದ್ರಹಾಸ ರೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸ್ಥಳೀಯ ಗಣ್ಯರಾದ ಶ್ರೀಧರ ಆರಿಗ ನೂಜಿಗುತ್ತು, ಲಿಂಗಪ್ಪ ಗೌಡ ಕೇಪುಂಜ, ನೂಜಿ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಪ್ರಧಾನ ಪರಿಚಾರಕ ಯಶೋಧರ ಗೌಡ ಮಾರಪ್ಪೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ.
ಸಂಜೆ 3.ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ತೆಗೆರ್ ತುಳುಕೂಟದ ಅಧ್ಯಕ್ಷ ವಾಸುದೇವ ಗೌಡ ಕೇಪುಂಜ ಅಧ್ಯಕ್ಷತೆ ವಹಿಸಲಿದ್ದು ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್, ಪುತ್ತೂರು ಗ್ರಾಮಾಂತರ ವೃತ್ತನಿರೀಕ್ಷಕ ಅನಿಲ್ ಕುಲಕರ್ಣಿ, ಕಡಬ ಮೆಸ್ಕಾಂ ಜೆ.ಇ. ನಾಗರಾಜ್, ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊಲ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ವಕೀಲರಾದ ದುರ್ಗಾ ಪ್ರಸಾದ್ ಕುಂಬ್ರ, ದೇರಣ್ಣ ಗೌಡ ಗೌಡಿಗೆ, ವಿಜಯ ಕುಮಾರ್ ಕೇಪುಂಜ, ಬಾಲಕೃಷ್ಣ ಶಾಂತಿಗುರಿ, ಪ್ರಮೋದ್ ಇಚಿಲಡ್ಕ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಗೋಳಿಯಡ್ಕ ಧರ್ಮಶಿಖರದ ರವೀಂದ್ರ ಗುರುಸ್ವಾಮಿ, ಯಶೋಧರ ಶೆಟ್ಟಿ ಜೈಭಗವಾನ್, ಮಾಜಿ ಸೈನಿಕರಾದ ದಿವಾಕರ ಗೌಡ ಕೇಪುಂಜ, ರಾಜೇಂದ್ರ ಪಳಯನಡ್ಕ, ಸಾಮಾಜಿಕ ಸೇವೆಗೈದ ವಸುಧ ಕಾಂಚಿತ್ತಾಯ, ಶೇಖರ ಗೌಡ ಮಳೇಲ, ಪ್ರಗತಿಪರ ಕೃಷಿಕರಾದ ಬಾಬು ಗೌಡ ಕಾನದಬಾಗಿಲು, ಮೋನಪ್ಪ ಗೌಡ ನಡುಗುಡ್ಡೆ, ತಿಮ್ಮಯ್ಯ ರಾಣ್ಯ ನೂಜಿ, ನಾಟಿ ವೈದ್ಯೆ ಹೊನ್ನಮ್ಮ ನೀರಾರಿ, ರುಕ್ಮಿಣಿ ಬಾಂತಾಜೆ, ಹಿರಿಯರಾದ ಎಲ್ಯಕ್ಕ ಗರ್ಗಸ್ಪಾಲ್, ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಜ್ವಲ್ ಕೇಪುಂಜ, ಸಹಕಾರಿ ಕ್ಷೇತ್ರದಲ್ಲಿ ಉಮೇಶ್ ರೈ ಮನವಳಿಕೆ, ಹಾಗೂ ಯೋಗಾಸನದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಕು.ಸೌಮ್ಯ, ಕು.ಆಶಾ, ಕು.ಶಿಲ್ಪಾರವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಅಲ್ಲದೆ ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮದಲ್ಲಿ ಪ್ರಸುತ್ತ ಗದ್ದೆ ಬೇಸಾಯ ಮಾಡುತ್ತಿರುವ ಕೃಷಿಕರಿಗೆ ನೆನಪಿನ ಕಾಣಿಕೆ ನೀಡಲಾಗುವುದು.
ಬೆನ್ನಿದ ಕಂಡೊಡ್ ನಮ್ಮ ಜವನೆರ್ ಕ್ರೀಡಾಕೂಟದಲ್ಲಿ ಪುರುಷರಿಗೆ 500 ಕಿಲೋ ವಿಭಾಗದ 7 ಜನರ ಕೆಸರುಗದ್ದೆ ಹಗ್ಗಜಗ್ಗಾಟ, ಕೆಸರುಗದ್ದೆಯಲ್ಲಿ ಅಪ್ಪಂಗಾಯಿ ತಪ್ಪಂಗಾಯಿ ಆಟ, ಕೆಸರು ಗದ್ದೆ ಓಟ, 10ನೇ ತರಗತಿ ಕೆಳಗಿನ ಮತ್ತು 5ನೇ ತರಗತಿ ಕೆಳಗಿನ ವಿದ್ಯಾಥರ್ಿಗಳಿಗೆ ಕೆಸರುಗದ್ದೆ ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಮಹಿಳೆಯರ ವಿಭಾಗದಲ್ಲಿ ಕೆಸರುಗದ್ದೆ ಹಗ್ಗಜಗ್ಗಾಟ, ನಿಧಿಶೋಧನೆ, 10ನೇ ತರಗತಿ ಕೆಳಗಿನ ವಿದ್ಯಾಥರ್ಿನಿಯರಿಗೆ ಕೆಸರುಗದ್ದೆ ಹಗ್ಗಜಗ್ಗಾಟ, ಕೆಸರುಗದ್ದೆ ಓಟ ಏರ್ಪಡಿಸಲಾಗಿದು.್ದ ತುಳುನಾಡಿನ ಸಂಸ್ಕೃತಿ ಸಂಸ್ಕಾರ ತುಳುಭಾಷೆಯನ್ನು ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ತುಳುಪದ್ದತಿಯಂತೆ ನಡೆಯುವ ಈ ಸಾರ್ವಜನಿಕ ಕ್ರೀಡಾಕೂಟದಲ್ಲಿ ಊರಪರವೂರ ಎಲ್ಲಾ ಕ್ರೀಡಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಹಾಗೂ ಸಂಪರ್ಕಕ್ಕಾಗಿ 9741770677, 9901367298, 9731563699, 9900889270, 9741483085 ಕೋರಲಾಗಿದೆ ಎಂದು ತೆಗೆರ್ ತುಳುಕೂಟದ ಅಧ್ಯಕ್ಷ ತೆಗೆರ್ ವಾಸುದೇವ ಗೌಡ ಕೇಪುಂಜ, ಸಂಚಾಲಕ ತೆಗೆರ್ ಉಮೇಶ್ ಶೆಟ್ಟಿ ಸಾಯಿರಾಂ, ಗೌರವಾಧ್ಯಕ್ಷ ತೆಗೆರ್ ದುಗ್ಗಣ್ಣ ಗೌಡ ಹೊಸಮನೆ, ಕಾರ್ಯದರ್ಶಿ ತೆಗೆರ್ ಗಣೇಶ್ ತಲೆಕ್ಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.