? ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ ➤ ಆಸ್ಪತ್ರೆಗೆ ದಾಖಲಿಸಿ ಆಸರೆಯಾದ ಖಾಕಿ ಪೊಲೀಸ್ ಅಧಿಕಾರಿ

(ನ್ಯೂಸ್ ಕಡಬ) newskadaba.com ಗದಗ, ಫೆ. 14. ಬಸ್ ನಿಲ್ದಾಣದಲ್ಲಿ ಪತ್ತೆಯಾದ ನವಜಾತ ಶಿಶುವೊಂದನ್ನು ಪೋಲಿಸರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಇಲ್ಲಿನ ಗಜೇಂದ್ರಗಡ ಸಮೀಪ ನಡೆದಿದೆ.

ಬಸ್ ನಿಲ್ದಾಣದ ಬಳಿ ನವಜಾತ ಶಿಶುವಿನ ಆಳುವಿನ ಧ್ವನಿ ಸ್ಥಳಿಯರಿಗೆ ಕೇಳಿಸಿದ್ದು, ಸಾರ್ವಜನಿಕರು ಧ್ವನಿ ಕೇಳಿದ ಕಡೆ ಹುಡುಕಿದಾಗ ಬಟ್ಟೆಯಲ್ಲಿ ಸುತ್ತಿದ್ದ ನವಜಾತ ಗಂಡು ಶಿಶು ಪತ್ತೆಯಾಗಿದೆ. ತಕ್ಷಣವೇ ಸಮೀಪದ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಗಜೇಂದ್ರಗಡ ಠಾಣೆಯ ಹಿರಿಯ ಅಧಿಕಾರಿ ಭೀಮರಾಜ್, ಮಗುವನ್ನ ವಶಕ್ಕೆ ಪಡೆದುಕೊಂಡು ಸ್ಥಳೀಯರಿಂದ ಹೇಳಿಕೆ ದಾಖಲಿಸಿ, ಹಸಿವಿನಿಂದ ಕಂಗೆಟ್ಟು, ಆರೋಗ್ಯದಲ್ಲಿ ಏರುಪೇರಾಗಿದ್ದನ್ನು ಗಮನಿಸಿ ಜಿಲ್ಲಾಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Also Read  ರಸ್ತೆ ಅಪಘಾತ- ಯುವಕ ಮೃತ್ಯು..!  

error: Content is protected !!
Scroll to Top