ಮಂಗಳೂರು: ಬಸ್ ಪಾಸ್ ಅವ್ಯವಸ್ಥೆಯ ವಿರುದ್ದ ದ.ಕ.ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 13. ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಬಸ್ ಪಾಸ್ ಅವ್ಯವಸ್ಥೆ ಹಾಗೂ ಎಲ್ಲಾ ವರ್ಗದ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಮಂಗಳೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

 

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ NSUI ಅಧ್ಯಕ್ಷರಾದ ಸವಾದ್ ಸುಳ್ಯ ಮಾತನಾಡಿ, ಪ್ರಸ್ತುತ ಬಸ್ ಪಾಸ್ ಅನ್ನು ಸೇವಾ ಸಿಂಧು ಆ್ಯಪ್ ಮೂಲಕ ನೀಡುವುದಿಂದ ವಿದ್ಯಾರ್ಥಿಗಳು ಕಷ್ಟ ಅನುಭವಿಸುವಂತಾಗಿದೆ, ಈ ಹಿಂದಿನಂತೆ ನೀಡುತ್ತಿದ್ದ ಹಾಗೆ ಬಸ್ ಪಾಸ್ ಅನ್ನು ವಿತರಿಸಬೇಕು ಹಾಗೂ ಸಿದ್ಧರಾಮಯ್ಯರ ಸರ್ಕಾರವಿದ್ದಾಗ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉಚಿತ ಬಸ್ ಪಾಸ್ ಯೋಜನೆಯನ್ನು ಮರು ನಿಯೋಜನೆಗೊಳಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ NSUI ನ ಕಾರ್ಯದರ್ಶಿ ಫಾರೂಕ್ ಬಯಾಬೆ ಪ್ರಸ್ತುತ ಬಸ್ ಪಾಸ್ ಅವ್ಯವಸ್ಥೆಯಿಂದ ಅನೇಕ ವಿದ್ಯಾರ್ಥಿಗಳು ಕಷ್ಟ ಅನುಭವಿಸುವಂತಾಗಿದೆ. ಅಲ್ಪಸಂಖ್ಯಾತರು, ದಲಿತರು ಹಾಗೂ ಸಮಾಜದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ NSUI ನ ರಾಷ್ಟ್ರೀಯ ಸಂಯೋಜಕ ಅನ್ವಿತ್ ಕಟೀಲ್, ಶೌನಕ್ ರೈ, ಶೇಖ್ ಅಫ್ಶನ್, ಕೌಶಿಕ್ ಗೌಡ, ಆಶಿಕ್ ಅರಂತೋಡು, ಶಫೀಕ್, ಅಂಕುಶ್ ಶೆಟ್ಟಿ, ಪ್ರಿಸ್ಟನ್, ರಾಝಿ ಹಾಗೂ ಇನ್ನಿತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Also Read  ಕಡಬ: ತಾಲೂಕು ವಿಕಲಚೇತನರ ವೈದ್ಯಕೀಯ ಶಿಬಿರ

error: Content is protected !!
Scroll to Top