ಕಡಬ: ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 7 ಸದಸ್ಯರ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 13. ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿಗೆ 7 ಜನ ಸದಸ್ಯರನ್ನು ನೇಮಕಗೊಳಿಸಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖಾ ಸಹಾಯಕ ಆಯುಕ್ತರು ಪ್ರಕಟಣೆ ಹೊರಡಿಸಿದೆ.

ನೇಮಕಗೊಂಡವರು ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ, ಸೀತಾರಾಮ ಗೌಡ ಪೊಸವಳಿಕೆ, ಆನಂದ ಅಂಗಡಿಮನೆ, ಶ್ರೀಮತಿ ಎನ್, ಸವಿತಾ ಕಾಮತ್, ಶ್ರೀಮತಿ ಹೇಮಲತಾ ಎಸ್. ನಾಯ್ಕ್, ಜಯರಾಮ ಗೌಡ ಪಡೆಜ್ಜಾರು, ಸೋಮಪ್ಪ ನಾಯ್ಕ್, ಎಂಬವರಾಗಿದ್ದಾರೆ. ಈ ದೇವಸ್ಥಾನವು ಪ್ರ ವರ್ಗ ಬಿ. ಗೆ ಸೇರಿದ್ದು, ಈ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಅರ್ಜಿಗಳನ್ನು ಸಲ್ಲಿಸಲಾಗಿತ್ತು, ಈ ಅರ್ಜಿಗಳನ್ನು ಪೋಲಿಸ್ ಇಲಾಖೆ ಹಾಗೂ ತಹಶೀಲ್ದಾರ್ ಅವರ ಸತ್ಯಾಪನಾ ವರದಿಯೊಂದಿಗೆ 2021ರ ಜನವರಿ 25ರಂದು ನಡೆದ ಜಿಲ್ಲಾ ಧಾರ್ಮಿಕ ಪರಿಷತ್‌ ನ ಸಭೆಯಲ್ಲಿ ಮಂಡಿಸಿ ಈ ನೇಮಕಾತಿಯನ್ನು ಮಾಡಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಇಚ್ಲಂಪಾಡಿ: ಕಿರು ಸೇತುವೆ ಕಾಮಗಾರಿ ಪರಿಶೀಲನೆ

error: Content is protected !!
Scroll to Top